ಅತಿವೃಷ್ಟಿ ಅನಾವೃಷ್ಟಿ
ಪೀಠಿಕೆ:
- ಅತಿವೃಷ್ಟಿಎಂದರೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವುದು. ಇದರಿಂದ ಅನೇಕ ಹಾನಿಗಳಾಗುತ್ತವೆ. ಜನಜೀವನ ಅಸ್ತವ್ಯಸ್ತವಾಗುತ್ತದೆ.
- ಅತಿವೃಷ್ಟಿಯಿಂದ ಆಗುವ ದೊಡ್ಡ ಅನಾಹುತವೆಂದರೆ ಎಲ್ಲ ನದಿಗಳೂ ತುಂಬಿ ಹರಿಯುತ್ತವೆ . ಎಲ್ಲ ಬೆಳೆಗಳೂ ನಾಶವಾಗುತ್ತವೆ . ಅನೇಕ ಮನೆಗಳು ಸಂಚಾರಕ್ಕೂ ವ್ಯತ್ಯಯ ಉಂಟಾಗುತ್ತದೆ. ಜನರಿಗೆ ಅಡ್ಡಾಡಲು ತೊಂದರೆ ಆಗುತ್ತದೆ.
- ನೀರು ಧರೆಯ ಜೀವ ದ್ರವ ಜೀವ ದ್ರವ್ಯ ಭೂಮಿಯ ಮೇಲ್ಮೈನ ಶೇಖಡ ಎಪ್ಪತ್ತೋಂದು ಭಾಗವನ್ನು ಆವರಿಸಿ ಇಡೀ ಭೂಮಿಗೆ ಸುಂದರ ನೀಲವರ್ಣ ನೀಡಿರುವ ಈ ದ್ರವ್ಯವು ಭೂಮಿಯನ್ನು ಜೀವಲೋಕವಾಗಿಸುವಲ್ಲಿ
- ಅತ್ಯಂತ ಮಹತ್ವದ ಪಾತ್ರವನ್ನು ಪಡೆದಿವೆ. ನೀರಿಲ್ಲದೆ ಜೀವಿಗಳ ಬದುಕು ಅಸಾದ್ಯ.
- ಸಸ್ಯಗಳು ಉಸಿರಾಡಲು,ದ್ಯುತಿಸಂಶ್ಲೇಷಣೆ ನಡೆಸಸಲು, ನೆಲದಿಂದ ಪೋಷಕಾಂಶಗಳನ್ನು ಬೇರುಗಳ ಮೂಲಕ ಹೀರಿಕೊಳ್ಳಲು ನೀರು ಬೇಕೇ ಬೇಕು. ಹಾಗೆ ಪ್ರಾಣಿಗಳಲ್ಲಿ ಚಯಾಪಚಯ ಕ್ರಿಯೆ ನಡೆಸಲು, ಆಹಾರ ಜೀರ್ಣವಾಗಲು , ವ್ಯರ್ಥವಸ್ತುಗಳು ವಿಸರ್ಜನೆಗೊಳ್ಳಲು,
- ರಕ್ತ ಪರಿಚಲನೆಗೊಳ್ಳಲು ಇತ್ಯಾದಿಗಳಿಗೆ ಸಕಲ ಜೀವಿಗಳ ಮೂಲಭೂತ ಅವಷ್ಯಕವಾಗಿರುವ ನೀರು ಸದಾ ಭೂಮಿ ಮೇಲೆ ಇರಬೇಕೆಂದರೆ ಕಾಲಕ್ಕೆ ಸರಿಯಾಗಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗಬೇಕು.
- ಆದರೆ ಈ ಯಾವುದರ ಬಗ್ಗೆಯೂ ಯೋಚಿಸದ ಮಾನವ ಸ್ವಾರ್ಥಕ್ಕಾಗಿ ತನ್ನ ಅನುಕೂಲಕ್ಕಾಗಿ ಪರಿಸರದ ದುರ್ಭಳಕೆ ಮಾಡಿಕೊಳ್ಳುತ್ತಿದ್ದಾನೆ. ನಿಸರ್ಗವನ್ನು ಹಾಳು ಮಾಡುತ್ತಿದ್ದಾನೆ.
- ಇದರ ಪರಿಣಾಮದಿಂದಾಗಿ ಅತಿವೃಷ್ಟಿ ಅನಾವೃಷ್ಟಿಎಂಬ ಸಮಸ್ಯೆ ಎದುರಾಗುತ್ತದೆ.
ವಿಷಯ ಬೆಳವಣಿಗೆ:
- ಅತಿವೃಷ್ಟಿ ಎಂದರೆ ಹವಮಾನದ ಎರುಪೇರಿನಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಲೆ ಬರುವುದು. ಇದರಿಂದ ಪ್ರಕೃತಿಯಲ್ಲಿ ಅನೇಕ ಹಾನಿಯಾಗುತ್ತದೆ. ಜನಜೀವನ ಅಸ್ತವ್ಯಸ್ತವಾಗುತ್ತದೆ.
- ಸುನಾಮಿ, ಪ್ರವಾಹ, ಚಂಡಾಮಾರುತ ,ಭೂಕಂಪ ಮುಂತಾದ ಪ್ರಕೃತಿ ವಿಕೋಪಗಳಿಂದ ನದಿಗಳು ತುಂಬಿ ಹರಿಯುತ್ತವೆ. ಎಲ್ಲಾ ಬೆಳೆಗಳು, ಮನೆಗಳು ನಾಶವಾಗುತ್ತವೆ. ಸಂಚಾರಕ್ಕು ವ್ಯತ್ಯಯ ಉಂಟಾಗುತ್ತದೆ. ಜನರಿಗೆ ತಿರುಗಾಡಲು ತೊಂದರೆ ಆಗುತ್ತದೆ.
- ಸಮುದ್ರದಲ್ಲೆಲ್ಲ ಕೊರೆತ ಉಂಟಾಗುತ್ತದೆ. ನದಿಗಳಿಗೆ ಮಹಾಪೂರ ಹರಿದು ಬರುತ್ತದೆ. ಜನರು ಜಾನುವಾರುಗಳು ವಸತಿ ಸಮಸ್ಯೆ ಎಲ್ಲವನ್ನು ಎದುರಿಸಿ ಒಂದು ಹೊತ್ತಿನ ಊಟಕ್ಕು ಪರದಾಟ ಉಂಟಾಗುತ್ತದೆ.
- ಅಷ್ತೇ ಅಲ್ಲದೆ ಎಷ್ಟೋ ಜನರನ್ನು ಪ್ರಾಣಿಗಳನ್ನು ನೀರಿನ ರಬಸವು ಕೊಚ್ಚಿಕೊಂಡು ಹೋಗಿವೆ. ಇದಕ್ಕೆ ಕಳೆದ ವರ್ಷ ದೇಷದ ವಿವಿಧ ರಾಜ್ಯಗಳಲ್ಲಿ ಬಂದ ಅತಿವೃಷ್ಟಿಯೇ ಸಾಕ್ಷಿಯಾಗಿದೆ. ಆದರೆ ಈ ಅತಿವೃಷ್ಟಿಯನ್ನು ತಡೆಗಟ್ಟುವುದು ಕಷ್ಟಸಾದ್ಯವಾಗುತ್ತದೆ.
- ಅನಾವೃಷ್ಟಿ ಎಂದರೆ ಬೀಳಬೇಕಾದಷ್ಟು ಮಳೆ ಬಿಳದೇ ಇರುವುದು ಇದಕ್ಕೆ ಪ್ರಮುಖ ಕಾರಣ ಮಾನವ. ರೈತರ ಬರಡು ಭೂಮಿ ರಿಯಲ್ ಎಸ್ಟೇಟ್ ಉದ್ಯಮದವರ ಕಣ್ಣು ಕುಕ್ಕುತ್ತಿದೆ. ರೈತರ ಹೊಲವೋ ಬತ್ತಿದ ಕೆರೆಯೋ ಅವರ ಕೈ ಸೇರುತ್ತಿದೆ.
- ಫ್ಲಾಟುಗಳು ತಲೆ ಎತ್ತುತ್ತಿವೆ. ಹೈಟೆಕ್ ಹೆಸರಿನಲ್ಲಿ ಎಲ್ಲವನ್ನು ಕಾಂಕ್ರೀಟ್ ಮಯವಾಗಿಸುತ್ತಿದ್ದಾನೆ. ಇದರಿಂದ ಒಂದು ಹನಿ ನೀರಿಗಾಗಿಯೂ ಸಹ ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ.
- ಪರಿಣಾಮವಾಗಿ ಇದರ ಮಾಲಿಕರು ಜೇಬು ತುಂಬದಂತೆಲ್ಲಾ ಭೂಮಿ ಬರಿದಾಗುತ್ತದೆ. ರೈತ ಬರನಾಗುತ್ತಾನೆ. ಹಿಂದೆಲ್ಲಾ ಅರಣ್ಯ ಪರಿಸರ ನಾಶಕ್ಕೆಲ್ಲಾ ಕಾರ್ಖನೆ ಕೈಗಾರಿಕೆಗಳಿಗೆ ಕೈ ತೋರಿಸುತ್ತಿದ್ದರು ಆದರೆ ಇಂದು ಅನಾವೃಷ್ಟಿ ಉಂಟಾಗಲು ರಿಯಲ್ ಎಸ್ಟೇಟ್ ಉದ್ಯಮದತ್ತಲೂ ಬೆಟ್ಟು ತೋರಿಸುವಂತಾಗಿದೆ.
- ಈ ಅನಾವೃಷ್ಟಿಗೆ ಇನ್ನೊಂದು ಪ್ರಮುಖ ಕಾರಣವೆಂದರೆ ಹೆಚ್ಚುತ್ತಿರುವ ಜನಸಂಖ್ಯೆ ಅತಿಯಾದ ಜನಸಂಖ್ಯೆಯಿಂದ ವಸತಿ ವ್ಯವಸ್ಥೆ ಪೂರೈಕೆಗಾಗಿ ಕಾಡು ಕಡಿಯಲ್ಪಟ್ಟು ನಾಡಾಗಿ ಪರಿವರ್ಥನೆಯಾಗುತ್ತದೆ. ಮನೆ, ಕಟ್ಟಡ, ರಸ್ತೆ ಅಗಲಿಕರಣಕ್ಕಾಗಿ ಅರಣ್ಯನಾಶವಾಗುತ್ತದೆ.
- ಕಾಡಿದ್ದ ಜಾಗದಲ್ಲಿ ಕಾಂಕ್ರೀಟ್ ಕಾಡು ನಿರ್ಮಾಣವಾಗುತ್ತಿದೆ. ಹಳ್ಳಿ ಜನರು ನಗರದತ್ತ ಮುಖಮಾಡುತ್ತಿರುವುದರ ಪರಿಣಾಮವಾಗಿ ನಗರವೂ ವಿಸ್ತಾರಗೊಂಡು ಹಳ್ಳಿಯತ್ತ ಮುಖ ಚಾಚುತ್ತಿದೆ.
- ನಗರೀಕರಣ ರಸ್ತೆ ಅಗಲೀಕರಣ, ಕೈಗಾರಿಕರಣದಿಂದಾಗಿ ಪ್ಲಾನ್ ಸಂಸ್ಕೃತಿ ತಲೆ ಎತ್ತುತ್ತಿದೆ.
- ಈ ಎಲ್ಲದರ ಪರಿಣಾಮವಾಗಿ ಹವಮಾನದಲ್ಲಿ ಏರುಪೇರು ಉಂಟಾಗಿ ಪರಿಸರದ ಮೇಲೆ ಸವಾರಿ ಮಾಡಿದ ಮಾನವನ ಮೇಲೆ ಪ್ರಕೃತಿ ಪ್ರವಾಹಕ್ಕೆ ಮುಂದಾಗಿದೆ.
- ಎಂದೋ ಸುರಿಯಬೇಕಾದ ಮಳೆ ಇನ್ನೆಂದೋ ಸುರಿದು ಎಲ್ಲೋ ಸುರಿಯಬೇಕಾದ ಮಳೆ ಇನ್ನೆಲ್ಲೋ ಸುರಿಯುತ್ತಿದೆ. ಇದು ಪ್ರಕೃತಿ ವಿಕೋಪದ ಫಲಶೃತಿ.
ಉಪ ಸಂಹಾರ:
- ಹವಮಾನ ವೈಪರಿತ್ಯ ಜಲಕ್ಷಾಮಗಳಿಗೆ ಅರಣ್ಯನಾಶವೇ ಕಾರಣ, ವಿವಿಧ ಕಾರಣಗಳಿಂದಾಗಿ ಬಹುಪ್ರಮಾಣದಲ್ಲಿ ಅರಣ್ಯನಾಶವಾದಾಗ ವಾತಾವರಣದಲ್ಲಿ ಇಂಗಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚುತ್ತದೆ. ತಾಪಮಾನದಲ್ಲಿ ಏರಿಕೆಯಾಗುತ್ತದೆ.
- ಮಳೆ ಮಾರುತದಾಲ್ಲಿ ವ್ಯತಯಯವಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಎದುರಿಸುತ್ತಿರುವ ನರೆ ಹಾವಳಿಗಳು, ನೀರಿನ ಹಾಹಾಕಾರವಿರಲಿ ಎಲ್ಲವು ಇದರ ಪರಿಣಾಮವೇ, ಇದಕ್ಕೆ ಸೂಕ್ತ ಪರಿಹಾರ ಅರಣೀರಣ.
- ಅದ್ದರಿಣದ ನಾವೆಲ್ಲರು, ಅರಣೀಕರಣದತ್ತ ಮುಖ ಮಾಡೋಣ, ವನ ಮಹೋತ್ಸವ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡೋಣ. ಈ ಕಾರ್ಯಕ್ರಮ ಕೇವಲ ವೇದಿಕೆ ಗೆ ಅಷ್ಟೆ ಸೀಮಿತವಾಗದೆ ನಮ್ಮ ಜೀವನದಲ್ಲಿಯು ರೂಡಿಸಿಕೊಳ್ಳೋಣ.