ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ

 


ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ


ಪೀಠಿಕೆ:

  • ಒಂದು ರಾಷ್ಟ್ರದ ಭೌಗೋಳಿಕ ಪರಿಸರದಲ್ಲಿ ಜನರು ವಾಸಿಸುವ ಪ್ರದೇಶವನ್ನು ರಾಷ್ಟ್ರ ಎನ್ನುತ್ತೇವೆ ಹಾಗೂ ವಿವಿಧತೆಯಲ್ಲಿ ಏಕತೆಯಿಂದ ಇರುವುದನ್ನು ಭಾವೈಕ್ಯತೆ ಎನ್ನುತ್ತೆವೆ.
  • ರಾಷ್ಟ್ರೀಯ ಭಾವೈಕ್ಯತೆ ಎಂದರೆ ಒಂದು ದೇಶದಲ್ಲಿ ವಾಸಿಸುವ ಎಲ್ಲ ಜನರೂ ಸಹ ತಾವೆಲ್ಲಾ ಒಂದೇ ರಾಷ್ಟ್ರದ ನ ಎಂಬ ಭಾವನೆಯಿಂದ ಸಾಮರಸ್ಯ ಏಕತೆ , ಒಗ್ಗಟ್ಟುಗಳಿಂದ ಸಹಬಾಳ್ವೆ ಮಾಡುವ ಗುಣಧರ್ಮವೇ ರಾಷ್ಟ್ರೀಯ ಭಾವೈಕತೆ

ವಿಷಯ ಬೆಳವಣಿಗೆ:

  • ಭಾರತ ಹಲವು ಮತ ಧರ್ಮಗಳನ್ನು ಹೊಂದಿರುವ ದೇಶ , ಹಲವು ಜನಾಂಗದ ಜನರು ಪ್ರಾಚೀನ ಕಾಲದಿಂದ ಇಲ್ಲಿ ನೆಲೆಸಿದ್ದಾರೆ . ವೇಷ , ಭೂಷಣ , ಭಾಷೆ ಬೇರೆ ಬೇರೆಯಾದರೂ ಎಲ್ಲರೂ ಭಾರತೀಯರು .
  • ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ಗುಜರಾತ್‌ನಿಂದ ಪಶ್ಚಿಮಬಂಗಾಳದವರೆಗೂ ಇಪ್ಪತ್ತೊಂಬತ್ತು ರಾಜ್ಯಗಳನ್ನು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡು ವಿಶಾಲವಾಗಿ ಹಬ್ಬಿದೆ .
  • ನಮ್ಮ ರಾಷ್ಟ್ರದಲ್ಲಿ ಹಿಂದು , ಬೌದ್ಧ , ಜೈನ , ಮುಸ್ಲಿಂ , ಕ್ರೈಸ್ತ ಹೀಗೆ ಹಲವಾರು ಧರ್ಮದವರು ಸಾಕಷ್ಟು ಜನಸಂಖ್ಯೆ ಇದ್ದರೂ , ಎಲ್ಲರೂ ಭಾರತೀಯರು ಎಂಬ ಒಂದೇ ಭಾವನೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ .
  • ಇಲ್ಲಿ ಭಾಷೆ , ಆಚಾರ , ವಿಚಾರ , ಉಡುಗೆ , ಹಬ್ಬಗಳಲ್ಲಿ ಭಿನ್ನತೆ ಇದ್ದರೂ ರಾಷ್ಟ್ರದ ಏಕತೆಗೆ ಅಡ್ಡಿಯಾಗಿಲ್ಲ .
  • ಭಾರತ ಮಾತೆಯ ಮಕ್ಕಳು ಎಂಬ ಭಾವನೆ ಇದೆ. ಭಾರತ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹೊಂದಿದೆ . ಇಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ .
  • ಭಾರತದಂತಹ ಬಹುಭಾಷಿಕ , ಬಹು ಸಂಸ್ಕೃತಿಯ ವಿವಿಧ ಜಾತಿ – ಮತ – ಧರ್ಮಗಳಿರುವ ದೇಶದಲ್ಲಿ ಈ ಭಾವನೆ ಅತ್ಯವಶ್ಯಕವಾಗಿದೆ . ವಸುದೈವ ಕುಟುಂಬಕಂ ಎಂಬುವುದು ನಮ್ಮ ಸಂಸ್ಕೃತಿಯ ಮೂಲ ಮಂತ್ರವಾಗಿದೆ .
  • ಪರಕೀಯರ ಆಡಳಿತ ನಮ್ಮ ದೇಶದಲ್ಲಿ ಬಂದಾಗ ಜಾತಿ ಇತ್ಯಾದಿ ವಿಷಯಗಳಲ್ಲಿ ನಮ್ಮನ್ನು ಒಡೆದು ಆಳುವ ತಂತ್ರವನ್ನು ಅನುಸರಿಸುತ್ತಿದ್ದರು . ಇದರಿಂದ ನಮ್ಮಲ್ಲಿ ಸ್ವಲ್ಪಮಟ್ಟಿಗೆ ಭಿನ್ನಾಭಿಪ್ರಾಯಗಳು ಬಂದವು.
  • ಸ್ವತಂತ್ರ ಭಾರತದಲ್ಲಿಯೂ ಇಂತಹ ಭಾವನೆಗಳು ಮುಂದುವರಿಯುತ್ತಿರುವುದು ನಮ್ಮ ದೇಶದ ಅಭಿವೃದ್ಧಿಗೆ ಮಾರಕವಾಗಿ ದೊಡ್ಡ ಸಮಸ್ಯೆಯಾಗಿ ಪರಿಣಮಿಇಸಿದೆ .
  • ಇದು ಭಾರತದ ದೌರ್ಭಾಗ್ಯವೇ ಆಗಿದೆ . ರಾಷ್ಟ್ರೀಯ ಭಿನ್ನತೆಯಿಂದ ದೇಶವು ದುರ್ಬಲವಾಗಿರುತ್ತದೆ . ವಿವಿಧ ಸಮಸ್ಯೆಗಳು ರಾಜಕೀಯ ಮುಖಂಡರು , ಧಾರ್ಮಿಕತೆಯು ತಲೆಯೆತ್ತುತ್ತದೆ .
  • ರಾಜಕೀಯದಿಂದ ಒಂದುಗೂಡಿ ಬಾಳುವ ಜನತೆಯಲ್ಲಿ ಭೇದ , ದ್ವೇಷವನ್ನು , ಒಡಕನ್ನು ಉಂಟು ಮಾಡುವ ಪ್ರಸಂಗಗಳು ನಡೆಯುತ್ತಿವೆ , ಇವು ಶಾಶ್ವತವಲ್ಲ .
  • ಓಟಿಗಾಗಿ ರಾಜಕಾರಣಿಗಳು , ಸಮಾಜದಲ್ಲಿ ಒಡಕು ಉಂಟುಮಾಡುವ ಕಾರ್ಯಕ್ಕೆ ಜನರನ್ನು ಪ್ರೇರೇಪಿಸುವರು . ಅಧಿಕಾರಕ್ಕಾಗಿ ಸಮಾಜದ ಆರೋಗ್ಯವನ್ನು ಹಾಳು ಮಾಡುವರು , ಆದರೆ ಸಾಮಾನ್ಯ ಜನತೆ ಇದಕ್ಕೆ ಬೆಲೆ ಕೊಡದೆ ಎಲ್ಲರೂ ಒಂದು ಎಂಬ ಭಾವನೆಯಿಂದ ಬಾಳಿದರೆ , ಒಗ್ಗಟ್ಟಿನಿಂದ ಕಾರ್ಯ ಮಾಡಿದರೆ , ಜೀವನವೂ ಸುಖಮಯವಾಗುತ್ತದೆ ಹಾಗೂ ನಾಡು , ದೇಶ ಪ್ರಗತಿ ಹೊಂದುತ್ತದೆ .
  • ಆದುದರಿಂದ ನಾಯಕರು , ಸರ್ಕಾರ ಹಾಗೂ ಪ್ರತಿಯೊಬ್ಬ ನಾಗರೀಕರೂ ಸಹ ಸ್ವಾರ್ಥ ಭಾವನೆಗಳನ್ನು ದೂರಮಾಡಿ ನಾವೆಲ್ಲ ಒಂದು ಎಂಬ ಒಗ್ಗಟ್ಟಿನ ಭಾವನೆಯನ್ನು ಬೆಳೆಸಿಕೊಳ್ಳಬೇಕು .
  • ಈ ದೇಶದ ಅಖಂಡತೆ , ಹಾಗೂ ಭವ್ಯ ಸಂಸ್ಕೃತಿ ಪರಂಪರೆಗಳನ್ನು ಎತ್ತಿಹಿಡಿಯಬೇಕು . ದೇಶಭಕ್ತಿ , ತ್ಯಾಗ ಮನೋಭಾವನೆಯು ಜಾಗೃತವಾದಾಗ ಏಕತೆ ಗಟ್ಟಿಗೊಳ್ಳುತ್ತದೆ . ಭಾರತ ಸಂವಿಧಾನದಲ್ಲಿ ಮತೀಯ ಭೇದ ಭಾವಕ್ಕೆ ಅವಕಾಶವಿಲ್ಲ .
  • ಬಡವ , ಶ್ರೀಮಂತ , ಎಲ್ಲರೂ ಸಮಾನರಾಗಿ ಬಾಳಬೇಕು. ಎಲ್ಲ ಜಾತಿಯ ಜನರು ಸಮಾನತೆಯನ್ನು ಕಾಪಾಡಿಕೊಳ್ಳಬೇಕು . ಪ್ರಗತಿಪರ ಬೆಳವಣಿಗೆಗೆ ಭಾವೈಕ್ಯತೆ ಅಗತ್ಯವಾಗಿದೆ.

ಪ್ರಾಮುಖ್ಯತೆ :

  • ಒಂದು ರಾಷ್ಟ್ರದ ಜನತೆಯಲ್ಲಿ ಒಗ್ಗಟ್ಟು ಉಂಟುಮಾಡಲು ಭಾವೈಕ್ಯತೆ ಅಗತ್ಯವಾಗಿದೆ . ರಾಷ್ಟ್ರದ ಹಿತಾಸಕ್ತಿಯನ್ನು ಸಾಧಿಸಲು , ಅಭಿವೃದ್ಧಿ ಹೊಂದಲು ರಾಷ್ಟ್ರದ ಜನರು ತಾವೆಲ್ಲರೂ ಒಂದೆಂಬ ಭಾವನೆ ಬೆಳೆಸಲು ಭಾವೈಕ್ಯತೆ ಅಗತ್ಯವಾಗಿದೆ .
  • ಭಾವೈಕ್ಯತೆಯು ದೇಶದ ಸಮಗ್ರತೆ , ಸೋದರತೆ ಮತ್ತು ಸಮಾನತೆಗೆ ಪ್ರಮುಖ ಪ್ರೇರಣೆಯಾಗುತ್ತದೆ

ರಾಷ್ಟ್ರೀಯ ಭಾವೈಕ್ಯತೆಯ ಮೇಲೆ ಪ್ರಭಾವ ಬೀರುವ ಅಂಶಗಳು

1. ಸಾಂಸ್ಕೃತಿಕ ಅಂಶಗಳು :

  • ರಾಷ್ಟ್ರದ ವಿವಿಧ ಸಮುದಾಯಗಳಿಗೆ ತನ್ನದೇ ಆದ ಅಭಿವ್ಯಕ್ತಿ ಸ್ವರೂಪಗಳಿರುತ್ತವೆ . ಭಾಷೆ , ಉಡುಗೆ – ತೊಡುಗೆ , ಕಲೆ , ಸಾಹಿತ್ಯ , ವಾಸ್ತುಶಿಲ್ಪ .
  • ಊಟ – ಉಪಚಾರ , ರೀತಿ ನೀತಿಗಳು , ಧರ್ಮ , ಸಂಪ್ರದಾಯ , ನಡೆ – ನುಡಿ , ನಂಬುಗೆಗಳು ಮುಂತಾದವುಗಳೆಲ್ಲವೂ ಸಮುದಾಯದಿಂದ ಸಮುದಾಯಕ್ಕೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತವೆ .
  • ಪ್ರತಿಯೊಂದು ಸಮುದಾಯದಲ್ಲಿಯೂ ನಂಬುಗೆಯುಳ್ಳವರು ಮತ್ತು ಆಚಾರವಿಚಾರವುಳ್ಳವರಿರುತ್ತಾರೆ .
  • ಒಂದೇ ರಾಷ್ಟ್ರದಲ್ಲಿರುವ ಸಮುದಾಯದವರು , ಸಮಾಜದವರು , ಪ್ರದೇಶದವರು ತಮ್ಮ ತಮ್ಮ ಸಂಸ್ಕೃತಿ , ಧರ್ಮ , ಭಾಷೆ , ರೀತಿ ನೀತಿಗಳೇ ಶ್ರೇಷ್ಠವೆಂಬ ಸಂಕುಚಿತ ಭಾವನೆ , ಪ್ರತಿಷ್ಠೆ , ಅಹಂಕಾರಗಳೆಲ್ಲವೂ ಸಾಮಾಜಿಕ ಭಾವೈಕ್ಯತೆಯಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ.
  • ಅನ್ಯ ಸಂಸ್ಕೃತಿಗಳಲ್ಲಿಯ ಗುರುತಿಸುವ ಮತ್ತು ವಿವಿಧ ಸಂಸ್ಕೃತಿಗಳಲ್ಲಿಯ ಸಾಮ್ಯತೆಯನ್ನು ಬೆಳೆಸುವುದು ಮತ್ತು ಸಕಾರಾತ್ಮಕ ಬೇರೆ ವಿಭಿನ್ನವಾದ ಬೇರೆ ಗುರುತಿಸುವ ಮತ್ತು ರಾಷ್ಟ್ರೀಯ ಉತ್ತಮಗುಣಗಳನ್ನು ಹೃದಯ ವೈಶಾಲ್ಯತೆಯನ್ನು ಬೆಳೆಸುವುದು ಶಿಕ್ಷಣದಮೂಲಕ ಮನೋವೃತ್ತಿಯನ್ನು ರಾಷ್ಟ್ರದ ತ ಆಗಬೇಕು .

2. ಮಾನಸಿಕ ವಿಕಾಸ ಅಂಶಗಳು :

  • ಪ್ರತಿಯೊಂದು ರಾಜ್ಯದಲ್ಲಿ , ಸಮುದಾಯದಲ್ಲಿ , ಸಂಘ – ಸಂಸ್ಥೆಗಳಲ್ಲಿ , ಪ್ರತಿ ಗುಂಪಿನಲ್ಲಿ ಪ್ರತಿಯೊಬ್ಬನೂ ಅವನಿಗೆ ದೊರಕುವ ಅವಕಾಶಗಳನ್ನವಲಂಬಿಸಿ ಮಾನಸಿಕವಾಗಿ ಭಿನ್ನವಾಗಿರುತ್ತಾನೆ . ಅವನ ಜಾಣ್ನೆಯ ಮಟ್ಟ , ವಿಷಯ ಗ್ರಹಿಸಿ ಅರ್ಥಮಾಡಿಕೊಳ್ಳುವ ರೀತಿ , ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ರೀತಿ ಭಿನ್ನವಾಗಿರುತ್ತವೆ .
  • ಇಂಥ ವ್ಯತ್ಯಾಸವನ್ನು ಪಟ್ಟಣ ನಿವಾಸಿಗಳಲ್ಲಿ ಮತ್ತು ಗ್ರಾಮ ನಿವಾಸಿಗಳಲ್ಲಿ ಕಾಣಬಹುದು . ಇದೂಕೂಡ ರಾಷ್ಟ್ರದ ಪ್ರಜೆಗಳಲ್ಲಿ ಸಾಮರಸ್ಯ ತರಲಾರದು . ಆದ್ದರಿಂದ , ರಾಷ್ಟ್ರದ ಎಲ್ಲ ಪ್ರಜೆಗಳಿಗೆ ಸಮಾನಾವಕಾಶ ಮಾಡಿಕೊಡುವುದು ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ .

3. ದೈಹಿಕ ಸ್ವರೂಪದ ಅಂಶಗಳು :

  • ಎಲ್ಲ ಮಾನವರ ಸಮಗ್ರ ಸ್ವರೂಪವು ಒಂದೇ ಆಗಿರುತ್ತದೆಯಾದರೂ ವಿವಿಧ ಕುಲದ ಮಾನವರು ಭಿನ್ನ ಭೌಗೋಳಿಕ ಪ್ರದೇಶಗಳಲ್ಲಿ ವಿಕಾಸ ಹೊಂದಿರುವುದರಿಂದ ಮೇಲ್ನೋಟಕ್ಕೆ ಭಿನ್ನವಾಗಿ ಕಾಣುತ್ತಾರೆ .
  • ಅವರ ದೈಹಿಕ ಆಕಾರ ಸ್ವರೂಪಗಳು ಭಿನ್ನವಾಗಿರುತ್ತವೆ . ಈ ಲಕ್ಷಣಗಳನ್ನು ಆಯಾ ಸಮುದಾಯದ ಸದಸ್ಯರು ಅನುವಂಶೀಯವಾಗಿ ಪಡೆದುಕೊಂಡು ಜನ್ಮತಾಳಿರುತ್ತಾರೆ .
  • ಇಂಥ ದೈಹಿಕ ಸ್ವರೂಪದಲ್ಲಿಯ ಭಿನ್ನತೆಯೂಕೂಡ ರಾಷ್ಟ್ರೀಯ ಭಾವೈಕ್ಯತೆಗೆ ಅಡ್ಡಿಯುಂಟು ಮಾಡುತ್ತದೆ . ಆದರೆ , ಎಲ್ಲ ಮಾನವರಲ್ಲಿ ನಡೆಯುವ ದೈಹಿಕ ಪ್ರಕ್ರಿಯೆಗಳು ಒಂದೇ ಆಗಿರುತ್ತವೆ .
  • ಎಲ್ಲರ ಜೀವನಕ್ಕಾಗಿ ಬೇಕಾಗುವ ಆಮ್ಲಜನಕ , ಆಹಾರ , ನೀರು ಒಂದೇ , ಎಲ್ಲರ ಮೂಲ ಪ್ರವೃತ್ತಿಗಳೂ ಒಂದೇ . ಯಾವಕುಲದಲ್ಲಿಯೂ ಮೇಲು ಕೀಳು ಎನ್ನುವುದಿಲ್ಲವೆಂಬ ಭಾವನೆ ಎಲ್ಲರಲ್ಲಿಯೂ ಬಂದಾಗ ಮಾತ್ರ ರಾಷ್ಟ್ರೀಯ ಭಾವೈಕ್ಯತೆ ಸುಲಭವಾಗುತ್ತದೆ .

4. ಆರ್ಥಿಕ ಅಂಶಗಳು :

  • ವ್ಯಕ್ತಿ ವ್ಯಕ್ತಿಗಳ ನಡುವಿನ , ಸಮುದಾಯ ಸಮುದಾಯಗಳ ನಡುವಿನ ಆರ್ಥಿಕ ಭಿನ್ನತೆಯು ಅವರ ಬೌದ್ಧಿಕ ವಿಕಾಸ ಮತ್ತು ಅವರು ಪಡೆದ ಜೀವನ ಕೌಶಲ್ಯ , ಮುಂತಾದವುಗಳನ್ನು ಅವಲಂಬಿಸಿರುತ್ತದೆ .
  • ವ್ಯಕ್ತಿಗಳ ಅಥವಾ ಸಮುದಾಯಗಳಲ್ಲಿಯ ಆರ್ಥಿಕ ಅಸಮಾನತೆಯು ರಾಷ್ಟ್ರೀಯ ಭಾವೈಕ್ಯತೆಗೆ ತೊಡಕನ್ನು ಉಂಟುಮಾಡುತ್ತದೆ ಮತ್ತು ಅವರ ಮುಂಬರುವ ಸಂತತಿಗಳ ಶಿಕ್ಷಣ , ಮಾನಸಿಕ ವಿಕಾಸ ಮತ್ತು ಅವರಿಗೆ ಸಿಕ್ಕಬಹುದಾದ ಅವಕಾಶಗಳ ಮೇಲೆ ಪ್ರಭಾವಬೀರುತ್ತದೆ .
  • ಆದ್ದರಿಂದ ಬಡವರು ಶ್ರೀಮಂತರ ನಡುವಿನ ಆರ್ಥಿಕ ಅಂತರವನ್ನು ಕಡಿಮೆಗೊಳಿಸುವುದು ಸಮಾಜದ ಹೊಣೆಗಾರಿಕೆಯಾಗಿದೆ .

5. ಭೌಗೋಳಿಕ ಅಂಶಗಳು :

  • ಮಾನವರು ರಾಷ್ಟ್ರದಾದ್ಯಂತ ಮತ್ತು ಜಗತ್ತಿನಾದ್ಯಂತ ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ವಾಸಿಸುತ್ತಾರೆ ತಾವು ವಾಸಿಸುವ ಪ್ರದೇಶವು ತಮ್ಮ ವೈಯಕ್ತಿಕ ಸೊತ್ತು ಅಲ್ಲಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳೆಲ್ಲವೂ ತಮಗಾಗಿ ಮಾತ್ರವೆಂದು ಭಾವಿಸುತ್ತಾರೆ . ಅವರು ಪರಕೀಯರಿಂದ ಅತಿಕ್ರಮಣವನ್ನು ವಿರೋಧಿಸುತ್ತಾರೆ .
  • ಒಂದು ರಾಷ್ಟ್ರದಲ್ಲಿ ಭೌಗೋಳಿಕವಾಗಿ ಬೇರೆ ಬೇರೆ ರಾಜ್ಯಗಳನ್ನಾಗಿ ವಿಂಗಡಿಸಲಾಗಿರುತ್ತದೆ . ಪರಸ್ಪರ ಅತಿಕ್ರಮಣ ಮಾಡುವುದಿಲ್ಲ . ರಾಜ್ಯಗಳ ಗಡಿಗಳು ಸಂಪನ್ಮೂಲಗಳು ಸಾರ್ವಜನಿಕ ಸೊತ್ತು .
  • ಅದರ ಮೇಲೆ ದುರುಪಯೋಗದಿಂದ ಉಳಿದವರು ತಮ್ಮ ಅಧಿಕಾರದಿಂದ ಆಡಳಿತದ ಅನುಕೂಲಕ್ಕಾಗಿ ಒಂದೇ ರಾಷ್ಟ್ರದ ವಿವಿಧ ರಾಜ್ಯದವರು ವಲ ಕಾಲ್ಪನಿಕ , ರಾಷ್ಟ್ರದ ನೈಸರ್ಗಿಕ ಲ್ಲರಿಗೂ ಸಮಾನವಾದ ಹಕ್ಕು ಇದೆ . ಅದರ ವಂಚಿತರಾಗುತ್ತಾರೆ .
  • ನಮ್ಮ ನಾಗರಿಕರ ಹಕ್ಕು ಬಾಧ್ಯತೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ . ಇಂಥ ಮನೋಭಾವನೆಯಿಂದ ಮಾತ್ರ ರಾಷ್ಟ್ರೀಯ ಭಾವೈಕ್ಯತೆ ಸಾಧ್ಯವಾಗುವುದು .

ಉಪ ಸಂಹಾರ:

  • ಒಂದು ರಾಷ್ಟ್ರವು ಮುಂದುವರಿಯಬೇಕಾದರೆ ಬೇರೆ ಬೇರೆ ರಾಜ್ಯಗಳಿಗೂ ಕೇಂದ್ರಾಡಳಿತಕ್ಕೂ ಸಂಪೂರ್ಣ ಸಂಬಂಧವಿರಬೇಕು ಹಾಗೂ ಹೊಂದಾಣಿಕೆಯಿರಬೇಕು .
  • ಎಲ್ಲ ರಾಜ್ಯದ ಜನರಲ್ಲಿ ರಾಷ್ಟ್ರಪ್ರಜ್ಞೆ ಮತ್ತು ರಾಷ್ಟ್ರಾಭಿಮಾನ ಇರಬೇಕು.ಪ್ರಜೆಗಳು ರಾಷ್ಟ್ರದ ಕಷ್ಟಪಟ್ಟು ಕೆಲಸ ಮಾಡುವವರೂ ಅಭಿಮಾನಿಗಳೂ , ಸಾಹಸಿಗರೂ ,ಆಗಿರಬೇಕು .
  • ಇದು ನಮ್ಮ ದೇಶ , ಇದು ನಮ್ಮ ರಾಷ್ಟ್ರ ನಾವು ಈ ದೇಶದ ಮಕ್ಕಳು , ಇದರ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ನಾವು ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದೇವೆ ‘
  • ಎಂದು ನಂಬಿದವರೇ ರಾಷ್ಟ್ರಪ್ರೇಮಿಗಳು , ಇಂತಹ ಭಾವನೆಗಳಲ್ಲಿ ಎಲ್ಲ ಪ್ರಜೆಗಳಲ್ಲೂ ಏಕತೆ ಇರುವುದೇ ರಾಷ್ಟೀಯ ಬಾವೈಕೈತೆ

Post a Comment

0 Comments
* Please Don't Spam Here. All the Comments are Reviewed by Admin.