ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಪ್ರಶಸ್ತಿ ಪುರಸ್ಕೃತರು
ಭಾರತದಲ್ಲಿ ಸಾಹಿತ್ಯಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿ ಯಾವುದು
➤ ಜ್ಞಾನಪೀಠ ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು
➤ ಆಶಾಪೂರ್ಣಾ ದೇವಿ
ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
1. ಕುವೆಂಪು
➢ ಶ್ರೀ ರಾಮಾಯಣ ದರ್ಶನಂ-1967
2. ದರಾ ಬೇಂದ್ರೆ
➢ ನಾಕುತಂತಿ-1973
3. ಶಿವರಾಮ ಕಾರಂತ
➢ ಮೂಕ್ಕಜ್ಜಿಯ ಕನಸುಗಳು-1977
4. ಮಾಸ್ತಿ ವೆಂಕಟೇಶ ಅಯ್ಯಂಗಾರ್
➢ ಚಿಕ್ಕವೀರ ರಾಜೇಂದ್ರ - 1983
5. ವಿ ಕೃ ಗೋಕಾಕ್
➢ ಭಾರತ ಸಿಂಧೂ ರಶ್ಮಿ-1990
6. ಯು ಆರ್ ಅನಂತಮೂರ್ತಿ
➢ ಸಮಗ್ರ ಸಾಹಿತ್ಯ-1994
7. ಗಿರೀಶ್ ಕಾರ್ನಾಡ್
➢ ಸಮಗ್ರ ಸಾಹಿತ್ಯ-1998
8. ಚಂದ್ರಶೇಖರ್ ಕಂಬಾರ್
➢ ಸಮಗ್ರ ಸಾಹಿತ್ಯ- 2010
ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ
➤ 1915
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ
➤ ಬೆಂಗಳೂರು
ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು
➤ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನ್ ಸರ್ ಎಂ ವಿಶ್ವೇಶ್ವರಯ್ಯ
ಕನ್ನಡದ ರಾಷ್ಟ್ರ ಕವಿಗಳು
ಕನ್ನಡದ ಮೊದಲ ರಾಷ್ಟ್ರಕವಿ ಯಾರು
➤ ಎಂ ಗೊವಿಂದ ಪೈ
ಕನ್ನಡದ ದ್ವಿತೀಯ ರಾಷ್ಟ್ರಕವಿ ಯಾರು
➤ಕುವೆಂಪು
ಕುವೆಂಪು ಅವರ ನಂತರ ಕನ್ನಡದ ರಾಷ್ಟ್ರಕವಿ ಯಾರು
➤ ಜಿ ಎಸ್ ಶಿವರುದ್ರಪ್ಪ
ಪಂಪ ಪ್ರಶಸ್ತಿ
ಪಂಪ ಪ್ರಶಸ್ತಿಯನ್ನು ನೀಡುವವರು ಯಾರು
➤ ಕರ್ನಾಟಕ ಸರ್ಕಾರ
ಪಂಪ ಪ್ರಶಸ್ತಿಯನ್ನು ಪಡೆದ ಮೊದಲ ಕವಿ ಯಾರು
➤ ಕುವೆಂಪು-ಶ್ರೀ ರಾಮಾಯಣ ದರ್ಶನಂ-1987
ಪಂಪ ಪ್ರಶಸ್ತಿಯ ಮೊತ್ತ
➤ ಮೂರು ಲಕ್ಷ ರೂಪಾಯಿ, ಪ್ರಶಸ್ತಿ ಫಲಕ, ಪ್ರಮಾಣ ಪತ್ರ
2019ರ ಪಂಪ ಪ್ರಶಸ್ತಿಯ ವಿಜೇತರು
➤ ದಲಿತ ಕವಿ ಸಿದ್ದಲಿಂಗಯ್ಯ
ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡುವವರು
➤ ಬನವಾಸಿ ಕದಂಬ ಉತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು
ನೊಬೆಲ್ ಪ್ರಶಸ್ತಿ
ನೊಬೆಲ್ ಪ್ರಶಸ್ತಿಯ ಸ್ಥಾಪನೆ
➤ 1901 ರಿಂದ ಆಲ್ಫ್ರೆಡ್ ನೊಬೆಲ್ ಅವರ ಹೆಸರಿನಲ್ಲಿ ನೀಡಲಾಗುತ್ತದೆ
ನೊಬೆಲ್ ಪ್ರಶಸ್ತಿಯನ್ನು ಯಾವ ಯಾವ ಕ್ಷೇತ್ರದಲ್ಲಿ ನೀಡಲಾಗುತ್ತದೆ
➤ ಶಾಂತಿ, ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ ಶಾಸ್ತ್ರ, ಅರ್ಥಶಾಸ್ತ್ರ ವಿಭಾಗ
ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಭಾರತ ರತ್ನ ಪ್ರಶಸ್ತಿ
ಭಾರತ ರತ್ನ ಪ್ರಶಸ್ತಿಯ ಸ್ಥಾಪನೆ
➤ 1954
ಭಾರತ ರತ್ನ ಪ್ರಶಸ್ತಿ ನೀಡುವ ಪ್ರಮುಖ ಉದ್ದೇಶ
➤ ಅಪ್ರತಿಮ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುವುದು
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲಿಗರು
➤ ಚಕ್ರವರ್ತಿ ರಾಜಗೋಪಾಲಾಚಾರಿ 1954
ಭಾರತ ರತ್ನ ಪ್ರಶಸ್ತಿ ಪಡೆದ ಕನ್ನಡಿಗರು
- ಸರ್ ಎಂ ವಿಶ್ವೇಶ್ವರಯ್ಯ - 1955
- ಭೀಮ್ ಸೇನ್ ಜೋಶಿ - 2008
- ಸಿ ಎನ್ ಆರ್ ರಾವ್ - 2014
ಪದ್ಮವಿಭೂಷಣ ಪ್ರಶಸ್ತಿ
ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ಥಾಪನೆ
➤ 1954 ಜನೆವರಿ 2
ಮೊದಲ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
- ಸತ್ಯೇಂದ್ರನಾಥ ಬೋಸ್
- ನಂದಲಾಲ್ ಬೋಸ್
- ಜಾಕಿರ್ ಹುಸೇನ್
- ವಿ ಕೆ ಕೃಷ್ಣ ಮೆನನ್
- ಬಾಲ ಸಾಹೇಬ್ ಗಂಗಾಧರ್ ಖೇರ್
- ಜಿಗ್ಮೆ ದೊರ್ಜಿ ವಾಂಗ್ಚುಕೆ
ಪದ್ಮವಿಭೂಷಣ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ
➤ ವಿಜ್ಞಾನ-ತಂತ್ರಜ್ಞಾನ,ಸಂಗೀತ, ರಾಜಕೀಯ, ಶಿಕ್ಷಣ, ಸಾಹಿತ್ಯ
ಪದ್ಮಭೂಷಣ ಪ್ರಶಸ್ತಿ
ದೇಶದ ಅತ್ಯುನ್ನತ ಮೂರನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ
ಸ್ಥಾಪನೆ
➤1954 ಜನೆವರಿ 2
ಪ್ರಶಸ್ತಿ ಪುರಸ್ಕೃತರು
- ಹೋಮಿ ಜಹಂಗೀರ್ ಬಾಬಾ
- ಶಾಂತಿ ಸ್ವರೂಪ್ ಭಟ್ನಾಗರ
- ಸುಕುಮಾರ್ ಸೇನ್
ಪದ್ಮ ಶ್ರೀ ಪ್ರಶಸ್ತಿ
ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ
ಸ್ಥಾಪನೆ
➤1954 ಜನೆವರಿ 2
ಪ್ರಶಸ್ತಿಯ ಉದ್ದೇಶ
➤ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಆಸ್ಕರ್ ಅವಾರ್ಡ್
ಆಸ್ಕರ್ ಪ್ರಶಸ್ತಿಯನ್ನು ಚಿತ್ರರಂಗ ಕ್ಷೇತ್ರಕ್ಕೆ ನೀಡಲಾಗುತ್ತದೆ
ಆಸ್ಕರ್ ಪ್ರಶಸ್ತಿಯ ಸ್ಥಾಪನೆ
➤ 1927 ಮೇ 11
ಆಸ್ಕರ್ ಪ್ರಶಸ್ತಿ ನೀಡುವ ಪ್ರಮುಖ ಉದ್ದೇಶ
➤ ಆಸ್ಕರ್ ಪ್ರಶಸ್ತಿಯನ್ನು ಸಿನಿಮಾರಂಗದಲ್ಲಿ ವಿವಿಧ ವಿಭಾಗಗಳಲ್ಲಿ ನೀಡಲಾಗುತ್ತದೆ
➤ಉದಾಹರಣೆಗೆ: ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಪ್ರಶಸ್ತಿಗಳನ್ನು ನೀಡಲಾಗುತ್ತದೆ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ಥಾಪನೆ
➤ 1969
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಭಾಗ
➤ ಭಾರತೀಯ ಸಿನಿಮಾರಂಗ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡುವವರು
➤ ಭಾರತ ಸರ್ಕಾರ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡುವರು
➤ ಭಾರತದ ರಾಷ್ಟ್ರಪತಿಗಳು
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಮುಖ ಉದ್ದೇಶ
➤ ಸಿನಿಮಾರಂಗದ ಜೀವಮಾನ ಸಾಧನೆಗಾಗಿ
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯ ಮೊತ್ತ
➤ 10 ಲಕ್ಷ ರೂಪಾಯಿ (2020)
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕನ್ನಡಿಗರು
➤ ಡಾಕ್ಟರ್ ರಾಜಕುಮಾರ್ 1995 (ನಟ)
➤ ವಿ ಕೆ ಮೂರ್ತಿ 2008 (ಛಾಯಾಚಿತ್ರ ಗ್ರಾಹಕ)
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
➤ ಸ್ಥಾಪನೆ : 1954
ಪ್ರಶಸ್ತಿ ಪ್ರದಾನ ಮಾಡುವರು
➤ ರಾಷ್ಟ್ರಪತಿಗಳು
ಪ್ರಮುಖ ಉದ್ದೇಶ
➤ ಭಾರತೀಯ ಸಿನಿಮಾರಂಗವನ್ನು ಪ್ರೋತ್ಸಾಹಿಸುವ ಸಲುವಾಗಿ ನೀಡಲಾಗುತ್ತದೆ.
ಕರ್ನಾಟಕ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ
➤ ಕರ್ನಾಟಕದಲ್ಲಿ ಸಿನಿಮಾರಂಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡುವ ಪ್ರಶಸ್ತಿಯಾಗಿದೆ
ಮ್ಯಾನ್ ಬೂಕರ್ ಪ್ರಶಸ್ತಿ
➤ ಮೊದಲ ಮ್ಯಾನ್ ಬೂಕರ್ ಪ್ರಶಸ್ತಿ 1969 ಯು ಕೆ ಕಾದಂಬರಿಗಾರ ಪಿ ಎಚ್ ನ್ಯೂಬೈ ಅವರ Something to Answer for ಕಾದಂಬರಿಗೆ ನೀಡಲಾಯಿತು
ಯಾವ ಕ್ಷೇತ್ರಕ್ಕೆ ಪ್ರಶಸ್ತಿಯನ್ನು ನೀಡಲಾಗುತ್ತದೆ
➤ ಇಂಗ್ಲಿಷ್ ಕಾದಂಬರಿಗಳಿಗೆ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ನೀಡಲಾಗುತ್ತದೆ
ಮ್ಯಾನ್ ಬೂಕರ್ ಪ್ರಶಸ್ತಿಯನ್ನು ನೀಡುವವರು
➤ ಇಂಗ್ಲೆಂಡ್
ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಭಾರತೀಯರು
- ಸಲ್ಮಾನ್ ರಶ್ದಿ - ಮಿಡ್ ನೈಟ್ ಚಿಲ್ಡ್ರನ್ 1981
- ಅರುಂಧತಿ ರಾಯ್ - ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್ 1997
- ಕಿರಣ್ ದೇಸಾಯಿ - ಇನ್ಹೆರಿಟೆನ್ಸ್ ಆಫ್ ಲಾಸ್ 2006
- ಅರವಿಂದ ಅಡಿಗರ - ದಿ ವೈಟ್ ಟೈಗರ್ 2008
- ವಿ ಎಸ್ ನೈಪಾಲ್ - ಇನ್ ಎ ಫ್ರೀ ಸ್ಟೇಟ್ 1971
ಕ್ರೀಡಾ ಪ್ರಶಸ್ತಿಗಳು
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ
➤ ಪ್ರಶಸ್ತಿ ಸ್ಥಾಪನೆ 1991-92
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮೊದಲ ಪುರಸ್ಕೃತರು
➤ ವಿಶ್ವನಾಥ್ ಆನಂದ
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಮಹಿಳಾ ಆಟಗಾರ್ತಿ
➤ ಸೈನಾ ನೆಹ್ವಾಲ್
ಅರ್ಜುನ್ ಪ್ರಶಸ್ತಿ
➤ಎರಡನೇ ಅತ್ಯುನ್ನತ ಕ್ರೀಡಾ ಪ್ರಶಸ್ತಿ
➤1961 ರಲ್ಲಿ ಸ್ಥಾಪನೆ
ಅರ್ಜುನ್ ಪ್ರಶಸ್ತಿಯ ಪ್ರಮುಖ ಉದ್ದೇಶ
➤ ಪ್ರಶಸ್ತಿಗೆ ಆಯ್ಕೆಯಾಗಲು ಸತತವಾಗಿ ಮೂರು ವರ್ಷ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರಬೇಕು
ದ್ರೋಣಾಚಾರ್ಯ ಪ್ರಶಸ್ತಿ
ದ್ರೋಣಾಚಾರ್ಯ ಪ್ರಶಸ್ತಿಯ ಸ್ಥಾಪನೆ
➤ 1985
ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತದೆ
➤ ದ್ರೋಣಾಚಾರ್ಯ ಪ್ರಶಸ್ತಿ ಯನ್ನು ಉತ್ತಮ ಕ್ರೀಡಾ ತರಬೇತುದಾರರಿಗೆ ಈ ಒಂದು ಪ್ರಶಸ್ತಿಯನ್ನು ನೀಡಲಾಗುತ್ತದೆ.
