ಕನ್ನಡ ಜನಪ್ರಿಯ ಒಗಟುಗಳು

  1. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ - ಮಲ್ಲಿಗೆ
  2. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ - ಆಕಾಶ, ನಕ್ಷತ್ರ
  3. ಸುಟ್ಟ ಹೆಣ ಮತ್ತೆ ಸುಡ್ತಾರೆ - ಇದ್ದಿಲು
  4. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ - ಹಲಸಿನ ಹಣ್ಣು , ಬೀಜ
  5. ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ - ಬಳೆ
  6. ಒಂದು ಹಪ್ಪಳ ಊರಿಗೆಲ್ಲ ಊಟ - ಚಂದ್ರ
  7. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ - ಹುಣಸೇಹಣ್ಣು
  8. ನೀಲಿ ಕೆರೆಯಲಿ ಬಿಳಿ ಮೀನು - ನಕ್ಷತ್ರ
  9. ಒಂದು ತೇಲುತ್ತೆ ,ಒಂದು ಮುಳುಗುತ್ತೆ, ಒಂದು ಕರಗುತ್ತೆ. - ವಾರ,ತಿಂಗಳು,ವರ್ಷ
  10. ಬಾ ಅಂದರೆ ಬರೋಲ್ಲ , ಹೋಗು ಅಂದರೆ ಹೋಗೋಲ್ಲ - ಮಳೆ
  11. ನಾ ಇರುವಾಗ ಬರುತ್ತೆ , ನಾ ಹೋದ ಮೇಲೂ ಇರುತ್ತೆ - ಕೀರ್ತಿ
  12. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ - ಕಣ್ಣು
  13. ಅಕ್ಕನ ಮೇಲೆ ಛತ್ರಿ - ರೆಪ್ಪೆ
  14. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು - ತೆಂಗಿನ ಕಾಯಿ
  15. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ - ಕಣ್ಣು
  16. ಅಮ್ಮನ ಆಕಾಶವಾಣಿ ನಾನು - ಮಗು
  17. ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು - ಈರುಳ್ಳಿ
  18. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ - ಬಾಳೆಹಣ್ಣು
  19. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ - ಕಣ್ಣು
  20. ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ - ತೆಂಗಿನ ಕಾಯಿ
  21. ನೀನಿಲ್ಲದೆ ಊಟವಿಲ್ಲ - ಉಪ್ಪು
  22. ಬಿಳಿ ಸರದಾರನಿಗೆ ಕರಿ ಟೋಪಿ - ಬೆಂಕಿಕಡ್ಡಿ
  23. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ - ಸೂಜಿ
  24. ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ - ಹೇನು ಕೂದಲು
  25. ಕೆಂಪು ಕುದುರೆಗೆ ಲಗಾಮು, ಓಬ್ಬ ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ - ಬೆಂಕಿ,ಬಾಣಲೆ, ದೋಸೆ
  26. ಒಂದು ಮನೆಗೆ ಒಂದೇ ತೊಲೆ - ತಲೆ
  27. ಕಂದ ಬಂದ ಕೊಂದ ತಂದ - ಶ್ರೀ ರಾಮ ಚಂದ್ರ
  28. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ  - ಭೂಪಟ
  29. ಚಿಕ್ಕಕ್ಕನಿಗೆ ಪುಕ್ಕುದ್ದ - ಸೌಟು
  30. ಎರಡು ಮನೆಗೆ ಒಂದೇ ದೂಲ - ಮೂಗು
  31. ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ- ಕಣ್ಣು
  32. ಕಾಸಿನ ಕುದುರೆಗೆ ಬಾಲದ ಲಗಾಮು- ಸೂಜಿ ದಾರ
  33. ಎಲೆ ಇಲ್ಲಸುಣ್ಣ ಇಲ್ಲಬಣ್ಣವಿಲ್ಲ ತುಟಿ ಕೆಂಪಗಾಗಿದೆಮಳೆಯಿಲ್ಲ ಬೆಲೆಯಿಲ್ಲ ಮೈ ಹಸಿರಾಗಿದೆ- ಗಿಳಿ
  34. ಮನೆಮನೆಗೆರಡು ಬಾಗಿಲುಬಾಗಿಲ ಮುಂದೆ ಮುಚ್ಚಿದರೆ ಹಾನಿ ಇದೇನು?- ಮೂಗುಬಾಯಿ
  35. ಸುತ್ತ ಮುತ್ತ ಸುಣ್ಣದ ಗೋಡೆಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?- ಮೊಟ್ಟೆ
  36. ಅಂಗಳದಲ್ಲಿ ಹುಟ್ಟುವುದುಅಂಗಳದಲ್ಲಿ ಬೆಳೆಯುವುದುತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು?- ಕೋಳಿ
  37. ಇದ್ದಲು ನುಂಗುತ್ತ ಗದ್ದಲ ಮಾಡುತ್ತಾಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?- ರೈಲು
  38. ಊಟಕ್ಕೆ ಕುಳಿತವರು ಹನ್ನೆರಡು ಜನರುಬಡಿಸುವವರು ಇಬ್ಬರುಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ- ಗಡಿಯಾರ
  39. ಹಸಿರು ಹಾವರಾಣಿತುಂಬಿದ ತತ್ರಾಣಿಹೇಳದಿದ್ದರೆ ನಿಮ್ಮ ದೇವರಾಣಿ- ಕಲ್ಲಂಗಡಿ ಹಣ್ಣು
  40. ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ-ತೆಂಗು
  41. ಕಡಿದರೆ ಕಚ್ಚೋಕೆ ಆಗೋಲ್ಲ ಹಿಡದ್ರೆ ಮುಟ್ಟೋಕೆ ಸಿಗೋಲ್ಲ-ನೀರು
  42. ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ.-ದಾರಿ
  43. ಅಬ್ಬಬ್ಬ ಹಬ್ಬ ಬಂತುಸಿಹಿಕಹಿ ಎರಡೂ ತಂತು.-ಯುಗಾದಿ
  44. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ .-ಬದನೆಕಾಯಿ.
  45. ಸಾಗರ ಪುತ್ರ ,ಸಾರಿನ ಮಿತ್ರ.-ಉಪ್ಪು
  46. ಸಾವಿರಾರು ಹಕ್ಕಿಗಳುಒಂದೇ ಬಾರಿಗೆ ನೀರಿಗಿಳಿತವೆ.-ಅಕ್ಕಿ
  47. ಗುಡುಗುಗುಡುಗಿದರೆ ಸಾವಿರ ನಯನಗಳು ಅರಳುವುದು.-ನವಿಲು.
  48. ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.-ನದಿ
  49. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ ಮರಿಗಳು.- ಕೋಳಿ
  50. ಮೋಟು ಗೋಡೆ ಮೇಲೆದೀಪ ಉರೀತಿದೆ.- ಮೂಗುಬೊಟ್ಟು
  51. ಹೊಂಚು ಹಾಕಿದ ದೆವ್ವಬೇಡ ಬೇಡ ಎಂದರೂ ಜೂತೆಯೇ ಬರುತ್ತೆ.-ನೆರಳು
  52. ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ-ಗಾಣ
  53. ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು ನೂರಾಗಿ-ಶ್ಯಾವಿಗೆ
  54. ಮಣ್ಣು ಆಗಿದೆ ಕಲ್ಲು ಸಿಕ್ಕಿತುಕಲ್ಲು ಆಗಿದೆ ಬೆಳ್ಳಿ ಸಿಕ್ಕಿತುಬೆಳ್ಳಿ ಒಡೆದ ನೀರು ಸಿಕ್ಕಿತು-ತೆಂಗಿನಕಾಯಿ
  55. ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ ಕುಯ್ಯೋಮರ್ರೋ ಅಂತವಳೇ-ತಂಬೂರಿ
  56. ಹಾರಿದರೆ ಹನುಮಂತಕೂತರೆ ಮುನಿಕೂಗಿದರೆ ಕಾಡಿನ ಒಡೆಯ-ಕಪ್ಪೆ
  57. ಕೈಲಿದ್ದಾಗ ಗುದಿಸಾಡುತ್ತೇನೆಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ-ಕಸಪೊರಕೆ
  58. ಗಿಡ ಕೊಡಲಾರದುಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು-ಉಪ್ಪು
  59. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣಸಂಚಾರವಿಲ್ಲದ ಮಾರ್ಗಗಳು ಎಲ್ಲಿ?-ನಕ್ಷೆ
  60. ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು ಗೊತ್ತಾಗುತ್ತದೆ.- ಅನ್ನದ ಅಗುಳು.
  61. ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ.-ಸಾಬೂನು.
  62. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ ಮುಳ್ಳು.-ಬದನೆಕಾಯಿ.
  63. ನಾನು ತುಳಿದೆ ಅದನ್ನಅದು ತುಳಿಯೆತು ನನ್ನನ್ನ.-ನೀರು
  64. ಕೊಳದ ಒಳಗೆ ಒಂದು ಮರ ಹುಟ್ಟಿ ,ಬೇರು ಇಲ್ಲ ,ನೀರು ಇಲ್ಲ.-ಎಣ್ಣೆ ದೀಪ.
  65. ಬಡ ಬಡ ಬಂದ ಅಂಗಿ ಕಳಚಿದ ,ಬಾವಿಯೊಳಗೆ ಬಿದ್ದ.-ಬಾಳೆ ಹಣ್ಣು.
  66. ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು.-ಕನ್ನಡಿ
  67. ಅಕ್ಕ ಪಕ್ಕ ಚದುರಂಗ ,ಅದರ ಹೂವು ಪದುರಂಗ ಅದರ ಹೆಸರು ಅಯ್ಯಯ್ಯಪ್ಪ .ಇದು ಏನು?-ದತ್ತುರಿಯ ಮುಳ್ಳು.
  68. ವನದಲ್ಲಿ ಹುಟ್ಟಿ ,ವನದಲ್ಲಿ ಬೆಳೆದು ,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು.-ಕಮಲ.
  69. ಕಲ್ಲು ಕೋಳಿ ಕುಗುತ್ತದೆಮುಲ್ಲ ಚೂರಿ ಹಾಕುತ್ತಾನೆ.-ಗಿರಣಿ
  70. ಸಾವಿರ ತರುತ್ತೆ ಲಕ್ಷ ತರುತ್ತೆ ನೀರಿನಲ್ಲಿ ಹಾಕಿದರೆ ಸಾಯುತ್ತೆ.-ದುಡ್ಡು.
  71. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.-ಸಗಣಿ.
  72. ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ ಮಿಂಚುತ್ತದೆ ಮಿಂಚಲ್ಲಪೆಟ್ಟಿಗೆಗೆ ತುಂಬ್ತದೆ ದಾಗಿನ ಅಲ್ಲ.- ಗರಗಸ.
  73. ಕಡ್ಲೆ ಕಾಳಷ್ಟು ಹಿಂಡಿ೩೨ ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ.-ಹಲ್ಲುಪುಡಿ.
  74. ಕರಿ ಗುಡ್ಡ-ಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ.-ಗಡಿಗೆಮಜ್ಜಿಗೆ.
  75. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆಒಬ್ಬ ಇಳಿಯುತ್ತಾನೆ .-ರೊಟ್ಟಿದೋಸೆ
  76. ಕೆಂದ ಕುದುರೆ ,ಬಿಳಿ ತಡಿಕರೆ ಲಗಾಮುಅಣ್ಣ ಅತ್ತಾನೆತಮ್ಮ ಇಳಿತ್ತಾನೆ-ಬೆಂಕಿಸುಣ್ಣ ಹಚ್ಚಿದ ಹಂಚುಹೊಗೆರೊಟ್ಟಿ
  77. ಕಂಬ ಕಂಬದ ಮೇಲೆ ದಿಂಬದಿಂಬದ ಮೇಲೆ ಲಾಗಲೂಟೆಲಾಗಲೂಟೆ ಮೇಲೆ ಎರಡು ಹುಡ್ಗರು ಓಡ್ಯಾಡುತಾರೆ.-ಕಣ್ಣು.
  78. ಶತ್ತಗಿಂಡಿಶಾರಾಗಿಂಡಿನೀರಾಗಿ ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ.-ಬೆಣ್ಣೆ ಉಂಡೆ.
  79. ಕುತ್ತಿಗೆ ಇದೆ ತಲೆ ಇಲ್ಲತೋಳಿದೆ ಬೆರಳಿಲ್ಲದಡಾ ಇದೆಕಾಲಿಲ್ಲ.-ಅಂಗಿ.
  80. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-ಮಲ್ಲಿಗೆ
  81. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು ಉಪ್ಪಿನಕಾಯಿ-ಆಕಾಶನಕ್ಷತ್ರ
  82. ಸುಟ್ಟ ಹೆಣ ಮತ್ತೆ ಸುಡ್ತಾರೆ-ಇದ್ದಿಲು
  83. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ- ಬಾಳೆ ಹಣ್ಣು
  84. ಅಂಗೈ ಕೊಟ್ಟರೆ ಮುಂಗೈನೂ ನುಂಗುತ್ತದೆ- ಬಳೆ
  85. ಒಂದು ಹಪ್ಪಳ ಊರಿಗೆಲ್ಲ ಊಟ- ಚಂದ್ರ
  86. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ- ಹುಣಸೇಹಣ್ಣು
  87. ನೀಲಿ ಕೆರೆಯಲಿ ಬಿಳಿ ಮೀನು-ನಕ್ಷತ್ರ
  88. ಒಂದು ತೇಲುತ್ತೆ ,ಒಂದು ಮುಳುಗುತ್ತೆಒಂದು ಕರಗುತ್ತೆ.-ವಾರ,ತಿಂಗಳು,ವರ್ಷ
  89. ಬಾ ಅಂದರೆ ಬರೋಲ್ಲ ಹೋಗು ಅಂದರೆ ಹೋಗೋಲ್ಲ-ಮಳೆ
  90. ನಾ ಇರುವಾಗ ಬರುತ್ತೆ ನಾ ಹೋದ ಮೇಲೂ ಇರುತ್ತೆ-ಕೀರ್ತಿ
  91. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ-ಕಣ್ಣು
  92. ಅಕ್ಕನ ಮೇಲೆ ಛತ್ರಿ- ರೆಪ್ಪೆ
  93. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ ಒಂದೇ ಕಣ್ಣು-ತೆಂಗಿನ ಕಾಯಿ
  94. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ-ಕಣ್ಣು
  95. ಅಮ್ಮನ ಆಕಾಶವಾಣಿ ನಾನು-ಮಗು
  96. ಅಂಗಡಿಯಿಂದ ತರೋದು ಮುಂದಿಟ್ಟುಕೊಂಡು ಅಳೋದು-ಈರುಳ್ಳಿ
  97. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು ನುಂಗಣ್ಣ- ಬಾಳೆಹಣ್ಣು
  98. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ ನೋಡುತ್ತೆ-ಕಣ್ಣು
  99. ಒಂದು ಮಡಕೆಮಡಕೆಯೊಳಗೆಕುಡಿಕೆಕುಡಿಕೆಯಲ್ಲಿ ಸಾಗರ-ತೆಂಗಿನ ಕಾಯಿ
  100. ನೀನಿಲ್ಲದೆ ಊಟವಿಲ್ಲ- ಉಪ್ಪು
  101. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ
  102. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ - ಸೂಜಿ
  103. ಮೂರು ಕಾಸಿನ ಕುದುರೆಗೆ ಮುನ್ನೂರು ರೂಪಾಯಿನ ಹಗ್ಗ-ಹೇನು ಕೂದಲು
  104. ಕೆಂಪು ಕುದುರೆಗೆ ಲಗಾಮುಓಬ್ಬ ಹತ್ತುತ್ತಾನೆ ಇನ್ನೊಬ್ಬ ಇಳಿತಾನೇ-ಬೆಂಕಿ,ಬಾಣಲೆದೋಸೆ
  105. ಒಂದು ಮನೆಗೆ ಒಂದೇ ತೊಲೆ-ತಲೆ
  106. ಕಂದ ಬಂದ ಕೊಂದ ತಂದ-ಶ್ರೀ ರಾಮ ಚಂದ್ರ
  107. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ ಮರುಭೂಮಿ-ಭೂಪಟ
  108. ಚಿಕ್ಕಕ್ಕನಿಗೆ ಪುಕ್ಕುದ್ದ-ಸೌಟು
  109. ಎರಡು ಮನೆಗೆ ಒಂದೇ ದೂಲ-ಮೂಗು
  110. ನೀರಿರೋತಾವ ನಿಲ್ಲಲೇ ಕೋಣ-ಚಪ್ಪಲಿ
  111. ಹೋದ ನೆಂಟಬಂದ ದಾರಿ ಗೊತ್ತಿಲ್ಲ-ನೆರಳು
  112. ಮರದೊಳಗೆ ಮರ ಹುಟ್ಟಿ ಮರ ಚಕ್ರ ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ-ಮನುಷ್ಯನ ಹುಟ್ಟು ಮಗು
  113. ಕಲ್ಲರಳಿ ಹೂವಾಗಿಎಲ್ಲರಿಗೂ ಬೇಕಾಗಿಮಲ್ಲಿಕಾರ್ಜುನನ ಗುಡಿಗೆ ಬೆಳಕಾಗಿಬಲ್ಲವರು ಹೇಳಿ -ಸುಣ್ಣ
  114. ಚಿಣಿಮಿನಿ ಎನ್ನುವ ಕೆರೆಚಿಂತಾಮಣಿ ಎನ್ನುವ ಹಕ್ಕಿಕೆರೆ ಬತ್ತಿದರೆ ಹಕ್ಕಿಗೆ ಮರಣ -ದೀಪ
  115. ಹೋಗುತ್ತಾಬರುತ್ತಾ ಇರುವುದು ಎರಡು,ಹೋದ ಮೇಲೆ ಬರಲಾರವು ಎರಡು-ಸಿರಿತನ-ಬಡತನಪ್ರಾಣ -ಬಡತನ
  116. ಒಂದು ಹಸ್ತಕ್ಕೆ ನೂರೆಂಟು ಬೆರಳು-ಬಾಳೆಗೊನೆ
  117. ಎಲ್ಲರ ಮನೆ ಅಜ್ಜಿಗೆ ಮೈಯೆಲ್ಲಾ ಕಜ್ಜಿ -ಜರಡಿ
  118. ಎಂದರೆ ತೆರಿತಾವಅಪ್ಪ ಎಂದರೆ ಮುಚ್ಚುತಾವ-ಬಾಯಿ
  119. ದಾಸ್ ಬುರುಡೆ ದೌಲಥ ಬುರುಡೆಲೋಕಕ್ಕೆಲ್ಲ ಎರಡೇ ಬುರುಡೆ-ಸೂರ್ಯ ಚಂದ್ರ
  120. ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ ವ್ಯಾಪಾರಕ್ಕೆ ಮಗಳು ಮದುವೆಗೆ -ಅಡಿಕೆ ಮರ
  121. ಹಾರಾಡುತ್ತಿದೆ ಗಾಳಿಪತವಲ್ಲ ಬಣ್ಣ ಮೂರಿರುವುದು ಕಾಮನಬಿಲ್ಲಲ್ಲ-ಧ್ವಜ
  122. ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು ನಾನ್ಯಾರು?-ತಾರೆಗಳು
  123. ಬಿಡಿಸಿದರೆ ಹೂವುಮದಚಿದರೆ ಮೊಗ್ಗು ,ಇದು ಏನು?-ಛತ್ರಿ
  124. ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ-ನೊಣ
  125. ಒಂಟಿಕಾಲಿನ ಕುಂಟ. ನಾನ್ಯಾರು?-ಬುಗರಿ
  126. ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ ಮಾಡೋಕೆ ಹೊಂಟ-ಇಲಿ
  127. ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು ಹಾಕಿದರೆ ಕೆಡುತ್ತೇ-ಕಳ್ಳಿ
  128. ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು-ಶ್ರೀಗಂಧ
  129. ಹಸಿರು ಕೋಟೆಬಿಳಿ ಕೋಟೆಕೆಂಪಿನ ಕೋಟೆ ಈ ಕೋಟೆಯೊಳಗೆ ಕಪ್ಪು ಸಿಪಾಯಿಗಳು-ಪರಂಗಿ ಹಣ್ಣು
  130. ಒಂದು ಮನೆಯಲ್ಲಿ ಮೂರು ಜನ ಅಕ್ಕ-ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ- ಜಾದಳಕಾಯಿ
  131. ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ ಮುಕ್ಕ ನೀರಿಲ್ಲ-ಕಿವಿ
  132. ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ-ರೊಟ್ಟಿ
  133. ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಬಣ್ಣ-ಎಲೆ ಅದಿಕೆ
  134. ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ-ಬಾಳೆಲೆ
  135. ಎರಡು ಬಾವಿಗಳ ನಡುವೆಯೊಂದು ಸೇತುವೆ-ಮೂಗು
  136. ತಲೆ ಇಲ್ಲ , ನಡು ಇಲ್ಲ ಕೈಗಳಿದ್ದರು ಬೆರಳಿಲ್ಲ-ಕೋಟು ಅಂಗಿ
  137. ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ ಸಾವು -ವಿಷ
  138. ಒಬ್ಬಳು ಮುಲುಗಿದಳುಒಬ್ಬಳು ಕರಗಿದಳು ಒಬ್ಬಳು ತೇಲಿದಳು -ಅಡಿಕೆ ಸುಣ್ಣ
  139. ಹೋಗೋದು ಮುಳುಗೋದು ತರೋದು ಏನು?-ಬಿಂದಿಗೆ
  140. ಕಿರೀಟ ಇದೆ ರಾಜ ಅಲ್ಲಕಲ ತಿಳಿಸುತ್ತ್ತೆ ಗಡಿಯಾರವಲ್ಲ-ಕೋಳಿ
  141. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ-ವರ್ಷ
  142. ಗುಂಡಾಕಾರ ಮೈಯೆಲ್ಲಾ ತೂತು-ದೋಸೆ
  143. ಬಂಗಾರದ ಗುಬ್ಬಿ ಬಾಲದಲ್ಲೇ ನೀರನ್ನು ಕುಡಿಯುತ್ತೆ-ಚಿಮಿಣಿ
  144. ಒಂದು ಮರ ಮರದಾಗ ಅಲ್ಲಅಲ್ಲಿನಾಗ ಕೊಬ್ರಿ ಗುಂಡ-ಆಕಾಶ ನಕ್ಷತ್ರ ಚಂದ್ರ
  145. ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು-ಏಲಕ್ಕಿ
  146. ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು-ತಾರೆ
  147. ಲಟಪಟ ಲೇಡಿಗೆ ಒಂದೇ ಕಣ್ಣು-ಸೂಜಿ
  148. ಹಸಿರು ಕೋಲಿಗೆ ಮುತ್ತಿನ ತುರಾಯಿ-ಜೋಳದ ತೆನೆ
  149. ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ-ನಾಲಿಗೆ
  150. ಸೂಜಿ ಸಣ್ಣಕಾಗೆ ಬಣ್ಣ -ಕೂದಲು
  151. ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು?-ನೆನಪು
  152. ಆರು ಕಾಲಿನ ಆನೆಆನೆ ತಿನ್ನುತ್ತೆ ನೀರು ಕುಡಿಯಲ್ಲ-ನುಸಿ
  153. ಊರಿಗೆಲ್ಲ ಒಂದೇ ಕಂಬಳಿ-ಆಕಾಶ
  154. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ-ಕುಂಕುಮ
  155. ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ-ಬೈತಲೆ
  156. ಒಂದು ಬತ್ತಿ ಮನೆಯೆಲ್ಲ ಬೆಳಕು-ಸೂರ್ಯ
  157. ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ -ಗಾಳಿ
  158. ಕಣ್ಣಿಗೆ ಹತ್ತಿರ ಕಾಲಿಗೆ ದೂರ-ಬೆಟ್ಟ
  159. ಊಟಕ್ಕೆ ಮೊದಲು ನಾನು ಅಂತ ಬರುತ್ತೆ -ಬಾಳೆ ಎಲೆ ತಟ್ಟೆ
  160. ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ-ಮಾವು
  161. ಹುಲಿಯ ಚಿಕ್ಕಮ್ಮ ಇಲಿಯ ಮುಕ್ಕಮ್ಮ-ಬೆಕ್ಕು
  162. ಕೂಗಿದರೆ ರಾವಣಹಾರಿದರೆ ಹನುಮಂತಕೂತರೆ ಮುನಿ-ಕಪ್ಪೆ
  163. ಕಲ್ಲಲ್ಲಿ ಹುಟ್ಟುವುದುಕಲ್ಲಲ್ಲಿ ಬೆಳೆಯುವುದುನೆತ್ತಿಯಲ್ಲಿ ಕುತಗುಟ್ಟುವುದು-ಸುಣ್ಣ
  164. ಕಾಂತಾಮಣಿ ಎಂಬ ಪಕ್ಷಿಚಿಂತಾಮಣಿ ಎಂಬ ಕೆರೆಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ-ದೀಪ
  165. ಕಲ್ಲು ತುಳಿಯುತ್ತೆಮುಳ್ಳು ಮೆಯುತ್ತೆನೀರು ಕಂಡ್ರೆ ನಿಲ್ಲುತ್ತೆ-ಚಪ್ಪಲಿ
  166. ಕಾಲಿಲ್ಲದೇ ನಡೆಯುವುದುತಲೆ ಎಲ್ಲಡೆ ನುಡಿಯುವುದುಮೇಲು ಕೆಳಗಾಗಿ ಓದುವುದು-ನದಿ
  167. ಜಂಬು ನೇರಳೆ ಮರಎಳೆದರೆ ನಾಲ್ಕು ಬಾವಿ ನೀರು ಒಂದೇ ಆಗುತ್ತದೆ-ಮೇಡು
  168. ಇಡೀ ಮನೆಗೆಲ್ಲ ಒಂದೇ ಕಂಬಳಿಬಾಯಿ ತೆರೆದರೆ ಮೂಗು ಮುಚ್ಚುತ್ತಿ-ಆಕಾಶ
  169. ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ-ಜೋಳದ ದಂಟು
  170. ಎತ್ತ ಹೋದರು ಕುತ್ತಿಗೆಗೆ ಕೈ ಹಾಕುತ್ತಾರೆ! ನಾನ್ಯಾರು?-ಸಾಲಿಗ್ರಾಮ
  171. ಕರಿ ಹುಡುಗನಿಗೆ ಬಿಳಿ ಟೋಪಿ -ಹೆಂಡದ ಮಡಿಕೆ
  172. ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು,ಇದನ್ನು ನೋಡಲು ಜನ ಕಾದಿಹರು-ನಾಣ್ಯ
  173. ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ.-ತಿಗಣೆ
  174. ಕುದುರೆ ಬಾಲದಿಂದ ನೀರು ಕುಡಿಯುತ್ತದೆ-ಹೇನು
  175. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು.-ಸೀತ ಫಲ
  176. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ.-ಕಣ್ಣು
  177. ಮನೆ ಮೇಲೆ ಮಲ್ಲಿಗೆ ಹೂವು.-ಮಂಜು
  178. ಹಾರಿದರೆ ಹನುಮಂತ ಕೂಗಿದರೆ ಶಂಖ.-ಕಪ್ಪೆ
  179. ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು.-ಸುಣ್ಣ
  180. ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ.-ಪೋಸ್ಟ್ ಕಾರ್ಡ್
  181. ಬಿಳಿ ಕುದುರೆಗೆ ಹಸಿರು ಬಾಲ.-ಮೂಲಂಗಿ
  182. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ.-ಕುಂಕುಮ
  183. ಬರೋದ ಕಂಡು ಕೈ ಒಡ್ತಾರೆ.-ಬಸ್
  184. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು-ಹುಂಜ
  185. ಹಸಿರು ಮುಖಕ್ಕೆ ವಿಪರೀತ ಕೋಪ ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ?-ಮೆಣಸಿನಕಾಯಿ
  186. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು-ಬೆಳ್ಳುಳ್ಳಿ
  187. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ?ನಾನ್ಯಾರು ಹೇಳಿ?-ನಕ್ಷತ್ರ
  188. ಹಗ್ಗ ಹಾಸಿದೆ ಕೋಣ ಮಲಗಿದೆ-ಕುಂಬಳಕಾಯಿಬಳ್ಳಿ
  189. ನನ್ನ ಕಂಡರೆ ಎಲ್ಲರು ಓದೀತಾರೆ -ಚೆಂಡು
  190. ಹಳ್ಳಿ ಗಡಿಯಾರ, ಒಳ್ಳೆ ಆಹಾರ-ಕೋಳಿ
  191. ನೀರು ಇರುತ್ತೆ ನದಿ ಅಲ್ಲಬಾಗಿಲು ಇರುತ್ತೆ ಮನೆ ಅಲ್ಲ-ಕಣ್ಣು.
  192. ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದಿದ್ದೆ ನಾನು ಯಾರು-ಗಾಂಧೀಜಿ
  193. ಬಾಯಲ್ಲಿ ಹಲ್ಲಿಲ್ಲಮಯಲ್ಲಿ ಶಕ್ತಿ ಇಲ್ಲ ತಲೆಯಲ್ಲಿ ಕೂದಲಿಲ್ಲ ಆದ್ರೂ ಎಲ್ರುನ್ನು ಕಾಡತಿನಿ ನಾನ್ಯಾರು.-ಸೊಳ್ಳೆ
  194. ಅಕ್ಷರಗಳಿದ್ದರೂ ಪುಸ್ತಕವಲ್ಲ,ಸಿಂಹವಿದ್ದರೂ ಅರಣ್ಯವಲ್ಲ,ದುಂಡಾಗಿದ್ದರೂ ಚಕ್ರವಲ್ಲ,ನಾನ್ಯಾರು.-ನಾಣ್ಯ
  195. ಗಂಟೆ ಹೊಡೆಯುತ್ತಾನೆ ಪೂಜಾರಿ ಅಲ್ಲ, PAPER ಅರಿಯುತ್ತಾನೆ ಆದರೆ ಹುಚ್ಚುನೂ ಅಲ್ಲಹಣ ಕೇಳುತ್ತಾನೆ ಭಿಕ್ಷುಕ ಅಲ್ಲ -ಕಂಡಕ್ಟರ್
  196. ಹಿಡಿದರೆ ಹಿಡಿಯಷ್ಟು ಬಿಟ್ಟರೆ ಮನೆತುಂಬ-ದೀಪದ ಬೆಳಕು
  197. ಕಾಲಿಲ್ಲದೆ ನಡೆಯುವುದು ಬಾಯಿಲ್ಲದೆ ನುಡಿಯುವುದು ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು-ನದಿ
  198. ಚೋಟುದ್ದ ಹುಡುಗಿಗೆ ಮಾರುದ್ದ ಜಡೆ - ಸೂಜಿ ದಾರ
  199. ಊರುಂಟು ಜನರಿಲ್ಲ ನದಿಯುಂಟು ನೀರಿಲ್ಲ - ಭೂಪಟ.
  200. ಚಿಕ್ಕ ಬೋರನಿಗೆ ಬಾಲದಲ್ಲಿ ಕತ್ತಿ : ಹುರಳಿಕಾಯಿ
  201. ಬಿಳಿಯ ಹೊಲದಲ್ಲಿ ಕರಿ ಕಾಳು ಕೈಯಲ್ಲಿ ಬಿತ್ತುತ್ತಾರೆ ಬಾಯಲ್ಲಿ ಏತ್ತುತ್ತಾರೆ ನಾನು ಯಾರು : ಪುಸ್ತಕ ಮತ್ತು ಅಕ್ಷರಗಳು
  202. ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು? : ಭಾರತ
  203. ನಾಲ್ಕು ಕಂಬಗಳುಂಟು ದೇವಾಲಯವಲ್ಲಎರಡು ಮೊರಗಳುಂಟು ಕೇರಲಾಗುವುದಿಲ್ಲಒಂದು ಕಹಳೆಯುಂಟು ಊದಲಾಗುವುದಿಲ್ಲಹಾಗಾದರೆ ನಾನು ಯಾರು? : ಆನೆ
  204. ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು? : ಭಾರತ
  205. ಕರಿ ಕಂಬ್ಳಿ ನೆಂಟಸರೊತ್ತಿನಲ್ಲಿ ಹೊಂಟಅವನ್ಯಾರು? : ಹೆಗ್ಗಣ
  206. ರಾಮನಂತ ಸಮುದ್ರ ರತ್ನದಂತ ಮೀನು ನೀರು ಬತ್ತಿಹೋದ್ರೆ ಮೀನು ಸತ್ತು ಹೋಗುತ್ತೆ : ದೀಪ / ಹಣತೆ
  207. ಕಲ್ಲರಳಿ ಹೂವಾಗಿಎಲ್ಲರಿಗು ಬೇಕಾಗಿ,. ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ. ಬಲ್ಲವರು ಹೇಳಿ ಸರ್ವಜ್ಞ”-ಸುಣ್ಣದ ಕಲ್ಲು!

Post a Comment

0 Comments
* Please Don't Spam Here. All the Comments are Reviewed by Admin.