ದುಡ್ಡು ಕೆಟ್ಟದ್ದು ನೋಡಣ್ಣ - ದುಗ್ಗಾಣಿಗೆ

 ದುಡ್ಡು ಕೆಟ್ಟದ್ದು ನೋಡಣ್ಣ - ದುಗ್ಗಾಣಿಗೆ


ದುಡ್ಡು ಕೆಟ್ಟದ್ದು ನೋಡಣ್ಣ - ದುಗ್ಗಾಣಿಗೆ

ದಡ್ಡನಾಗಬೇಡೋ, ತಿಂದೀ ನೀ ಮಣ್ಣ !

ದುಡ್ಡು ಕೆಟ್ಟದ್ದೊ ಹೆಡ್ಡ ಮೂಢಾತ್ಮ

ದೊಡ್ಡ ದೊಡ್ಡವರನ್ನೆ ಹೆಗ್ಗಾಲು ಇಡಿಸಿತು.


ದುಡ್ಡು ಕೆಟ್ಟದ್ದು ನೋಡಣ್ಣ

ಹೆಣ್ಣಿನ ಪೂಜೆಗೆ ಇಳಿಸಿ - ಮಣ್ಣಿನ

ಸಂತೇಲಿ ಇಲ್ಲದ ಮರ್ಯಾದೆ ಕೊಡಿಸಿ

ಮಿಣ್ಣನೆ ತಿಂದೀತು ಒಳಗ - ಮೆಲ್ಲನೆ


ಥಣ್ಣಗ ಮಾಡೀತು ಬೆಂಕಿಯ ಕಿಡಿ.

ರೊಕ್ಕ ಮುಕ್ಕಿಸೀತು ಮಣ್ಣು - ಅದ

ತಕ್ಕಂತೆ ಬಳಸಲು ತೆರೆಸೀತು ಕಣ್ಣು

ಮುಕ್ಕುವ ಚಪಲ ಏಕಿನ್ನು - ಮುಕ್ಕಿ


ಬಿಕ್ಕಳಿಸಲು ಕುಡಿಸೀತು ನೀರನ್ನು.

ಆಸೆ ಬಿದ್ದು ಮನದ ಮಾರಿ

ಹೊಂಟ್ಯಳೊ ಹುಡುಕುತ್ತ ನೂರೆಂಟು ಕೇರಿ

ಕಾಸು ಕಾಸನ್ನೂ ಹೆಕ್ಕಿ - ಮೂಳಿ

ಶಿಶುನಾಳಾಧಿಶನ ಮರೆತಾಳು ಸೊಕ್ಕಿ.

Post a Comment

0 Comments
* Please Don't Spam Here. All the Comments are Reviewed by Admin.