ಮನಸೇ ಮನಸಿನ ಮನಸ ನಿಲ್ಲಿಸುವುದು

ಮನಸೇ ಮನಸಿನ ಮನಸ ನಿಲ್ಲಿಸುವುದು


ಮನಸೇ ಮನಸಿನ ಮನಸ ನಿಲ್ಲಿಸುವುದು

ಮನಸಿನ ಮನ ತಿಳೀಯುವ ಮನ ಬ್ಯಾರೆಲೊ ಮನಸೇ.

ತನುತ್ರಯದೊಳು ಸುಳಿದಾಡುವ ಜೀವದ

ಗುಣವರಿತರೆ ನಿಜ ಬ್ಯಾರೆಲೊ ಮನಸೇ.


ದಶದಿಕ್ಕಿಗೆ ಹಾರಾಡುವ ಹಕ್ಕಿಯು

ವಶವಾಗಲಾಪರಿ ಬ್ಯಾರೆಲೊ ಮನಸೇ.

ಗೋವಿಂದ ಗುರುವಿನ ಚರಣ ಕಮಲದವಳು

ಗಾನಗೈಯೆಲೊ ಭ್ರಮರಾಳೀಯ ಮನಸೇ.


ವಿಷಯಗಳಲಿ ಸುಖಬಯಕೆ ಬಯಸಿ ಬಲು

ಕಸಿವಿಸಿಗೊಂಬುವುದೇತಕೊ ಮನಸೇ.

ಇಳೆಯೊಳು ಶಿಶುನಾಳಾಧೀಶ ನಿರ್ಮಲನ

ತಿಳಿದರೆ ಒಳಹೊರಗೊಂದೆಲೊ ಮನಸೇ.

Post a Comment

0 Comments
* Please Don't Spam Here. All the Comments are Reviewed by Admin.