ದೇವರಾಜ
ಕಾಲ: ಕ್ರಿ.ಶ.ಸು. 1410
ತಂದೆ: ಕಂಪ
- ವಿಜಯನಗರ ರಾಜ ವಂಶೀಯ. ಬುಕ್ಕೃಆಯನ ಮೊಮ್ಮಗನಿರಬಹುದೆಂದು ಊಹಿಸಲಾಗಿದೆ.
ಪ್ರಮುಖ ಕೃತಿಗಳು:
- ಸೊಬಗಿನ ಸೋನೆ
- ಅಮರುಕ
ಸೊಬಗಿನ ಸೋನೆ:
- ಈ ಕೃತಿಯು ಸಾಂಗತ್ಯ ಛಂದಸ್ಸಿನಲ್ಲಿ ರಚಿತವಾಗಿದೆ. ಇದು ಉಪಲಬ್ಧವಿರುವ ಕನ್ನಡದ ಮೊಟ್ಟ ಮೊದಲನೆಯ ಸಾಂಗತ್ಯ ಕೃತಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
- ಸೊಬಗಿನ ಸೋನೆಯು ಸುರಭಾವತಿ ಮತ್ತಿತರ ಏಳು ಕಥೆಗಳ ಸಂಗ್ರಹವಾಗಿದೆ. ಕೃತಿಯಲ್ಲಿ ಸಂಪ್ರದಾಯದಂತೆ ಅಷ್ಟಾದಶ ವರ್ಣನೆಗಳನ್ನು ಮಾಡಲಾಗಿದೆ. ಕವಿಯ ಕವಿತಾಶಕ್ತಿಯು ಉತ್ತಮವಾಗಿದೆ.
ಉದಾಹರಣೆಗೆ:
ಪುಳಕಿಸಿ ಮುತ್ತುಗಳಿಂ ರಾಗಿಸಿ ಕೆಂಬ
ವಳವಳ್ಳಿಯಿಂ ನೊರೆಯಿಂ ನಕ್ಕು |
ವಳಿಗೈಯಿಂ ತೞ್ಕೈಸಲುರ್ವುವೊಲಬ್ಧಿ
ಬಳೆವುದು ತಿಂಗಳೊಗೆಯಲಾಗ ||
ಅಮರುಕ :
- ಇದು ಒಂದು ಶತಕ ಸಾಹಿತ್ಯ ಕೃತಿಯಾಗಿದೆ.
- ಎಂಟನೇ ಶತಮಾನದಲ್ಲಿದ್ದ ಹಂಸಾನಂದಿ ಎಂಬ ಸಂಸ್ಕೃತ ಕವಿಯ ಅಮರುಕ ಕೃತಿಯ ಭಾಷಾಂತರವಾಗಿದೆ.
- ಈ ಕೃತಿಯು ಪರಿವರ್ಧಿನೀ ಷಟ್ಪದಿಯಲ್ಲಿದೆ. ಕವಿ ದೇವರಾಜನು ಪೂರ್ವ ಕವಿಗಳಲ್ಲಿ ವಾಲ್ಮೀಕಿ, ಕಾಳಿದಾಸ, ಬಾಣರನ್ನು ಸ್ಮರಿಸಿದ್ದಾನೆ.
