ಶ್ರೀಧರಾಚಾರ್ಯ
- ಸಂದಿಗ್ಧತೆಯಿಲ್ಲದೆ ಲಾಲಿತ್ಯವಾಗಿ ಶಾಸನ ವಿಷಯವನ್ನು ಪ್ರತಿಪಾದಿಸುವ ಕವಿತಾ ಸಾಮರ್ಥ್ಯ ಹೊಂದಿದ್ದ.
- ಕಾಲ: ಕ್ರಿ.ಶ.ಸು ೧೦೪೯.
- ಚಾಲುಕ್ಯ ಆಹವಮಲ್ಲ ಮೊದಲನೇ ಸೋಮೇಶ್ವರನ ಆಸ್ಥಾನದಲ್ಲಿದ್ದನು.
- ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ ಗ್ರಂಥವೆಂದು ಭಾವಿಸಲಾಗಿರುವ ಜಾತಕ ತಿಲಕವನ್ನು ಬರೆದ್ದಿದ್ದಾನೆ.
- ‘ಚಂದ್ರಪ್ರಭ ಪುರಾಣ’ ಎಂಬ ಕೃತಿಯನ್ನು ರಚಿಸಿದ್ದು ಅದು ಉಪಲಬ್ಧವಾಗಿಲ್ಲ.
- ಜಾತಕ ತಿಲಕ ಗ್ರಂಥದಲ್ಲಿ ಶ್ರೀಧರಾಚಾರ್ಯನು ಶಬ್ದ ಸೌಂದರ್ಯ ಪ್ರಸಾದ ಗುಣಗಳಿಂದ ಶಾಸ್ತ್ರವನ್ನು ಕಾವ್ಯದಂತೆ ಹೇಳಿದ್ದಾನೆ. ಇದು ಕಂದ ಮತ್ತು ವೃತ್ತಗಳಿಂದ ಕೂಡಿದೆ.
