ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನಗಳು

 ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನಗಳು


ಬನವಾಸಿಯ ಕದಂಬರು (ಕ್ರಿ.ಶ 345 - 540)


➤ ಸ್ಥಾಪಕ : ಮಯೂರವರ್ಮ (ಮಯೂರಶರ್ಮ) (345-360)

➤ ಕದಂಬರ ರಾಜಧಾನಿ : ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ)

➤ ಬನವಾಸಿಗೆ ವನವಾಸಿ, ವೈಜಯಂತಿ, ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.

➤ ಲಾಂಛನ : ಸಿಂಹ.

➤ ಕದಂಬರಲ್ಲಿ ಹಾನಗಲ್, ಚಂದಾವರ, ಗೋವೇ ಕದಂಬ ರೆಂದು ಮೂರು ಶಾಖೆಗಳಿದ್ದವು.

➤ ಕದಂಬರ ಮೂಲದ ಬಗ್ಗೆ 'ಶಾಂತಿವರ್ಮನ ತಾಳಗುಂದ ಶಾಸನ' ತಿಳಿಸುತ್ತದೆ.

➤  ಕನ್ನಡದ ಪ್ರಪ್ರಥಮ ಶಾಸನ - ಕಾಕುತ್ಸವರ್ಮನ ಹಲ್ಮಿಡಿ ಶಾಸನ.


ಮಾನ್ಯಖೇಟದ ರಾಷ್ಟ್ರಕೂಟರು (ಕ್ರಿ.ಶ 345 - 540)


➤ ಸ್ಥಾಪಕ : ದಂತಿದುರ್ಗ

➤ ರಾಜಧಾನಿ : ಮಾನ್ಯಖೇಟ ಅಥವಾ ಮಾಲಖೇಡವಾಗಿತ್ತು.

➤ ಲಾಂಛನ : ಗರುಡ

➤ ಹೆಸರಾಂತ ದೊರೆ : ಅಮೋಘವರ್ಷ ನೃಪತುಂಗ (814-878)

➤ ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.


ಮೌರ್ಯರು


➤ ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ. ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳಗಳಲ್ಲಿ ಕಂಡು ಬಂದಿವೆ.

➤ ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು.

➤ ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು : ಸುವರ್ಣಗಿರಿ, ಇಸಿಲ, ತೊಸಿಲ, ಸಂಪ.

➤ ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು : ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಅ.ಸಿದ್ದಾಪುರ, ಜಿ.ರಾಮೇಶ್ವರ, ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ, ಪಾಲ್ಕಿಗುಂಡು, ಕೊಪ್ಪಳ, ಗುಲ್ಬರ್ಗಾ ಜಿಲ್ಲೆಯ ಸನ್ನತಿ, ಬಳ್ಳಾರಿ ಜಿಲ್ಲೆಯ ನಿಟ್ಟೂರು, ಉದೇಗೊಳ್ಳಂ.


ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225)


➤ ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ, (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು. 

➤ರಾಜಧಾನಿ : ಪೈತಾನ್ ಅಥವಾ ಪ್ರತಿಷ್ಠಾನ.

➤ ಲಾಂಛನ : ವರುಣ.

➤ ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.

➤  ಮೂಲ ಪುರುಷ : ಸಿಮುಖ.

➤ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ

➤ ಶಾತವಾಹನರನ್ನು ' ಶಾತಕರ್ಣಿಗಳೆಂದು' ಕರೆಯುತ್ತಾರೆ.



ತಲಕಾಡಿನ ಗಂಗರು (ಕ್ರಿ.ಶ 350- 999)


➤  ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು.

➤ ಮೊದಲ ದೊರೆ : ದಡಿಗ (350 -400)

➤ ಮೊದಲ ರಾಜಧಾನಿ : ಕೋಲಾರ ಬಳಿಯ ಕುವಲಾಲ

➤ ಎರಡನೆಯ ರಾಜಧಾನಿ : ತಲಕಾಡು

➤ ತಲಕಾಡಿನ ಮತ್ತೊಂದು ಹೆಸರು : ತಲವನಪುರ.

➤ ಮೂರನೇ ರಾಜಧಾನಿ : ಚೆನ್ನಪಟ್ಟಣ ಬಳಿಯ ಮಾಕುಂದ

➤ ಲಾಂಛನ : ಆನೆ(ಮದಗಜ)

➤ ಪ್ರಸಿದ್ಧ ದೊರೆ : ದುರ್ವಿನೀತ (540-600)

➤ ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.

➤ ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು.


ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757)


 ಸ್ಥಾಪಕ : ಜಯಸಿಂಹ

➤ ರಾಜಧಾನಿ : ಬಾದಾಮಿ ಅಥವಾ ವಾತಾಪಿ (ಬಿಜಾಪುರ ಜಿಲ್ಲೆಯಲ್ಲಿದೆ)

 ಪ್ರಸಿದ್ಧ ದೊರೆ : ಇಮ್ಮಡಿ ಪುಲಕೇಶಿ (609-642)

➤ ರಾಜ ಲಾಂಛನ : ವರಹ.

➤ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ : ಚೀನಾದ ಬೌದ್ಧ ಯಾತ್ರಿಕ ಹ್ಯೂಯನ್ ತ್ಸಾಂಗ್.

➤ ಬಾದಾಮಿಯ ಚಾಲುಕ್ಯರ ನಿರ್ಮಿತ ಐಹೊಳೆಯನ್ನು 'ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ' ಎನ್ನುವರು.


ಕಲ್ಯಾಣದ ಚಾಲುಕ್ಯರು (ಕ್ರಿ.ಶ 973-1156 ಹಾಗೂ 1183-1200)


➤ ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ

➤ ರಾಜಧಾನಿ : ಕಲ್ಯಾಣ

➤  ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ (1076-1126)

➤ 1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200 ರವರೆಗೆ ರಾಜ್ಯಭಾರ ನಡೆಸಿದರು.


ಕಲ್ಯಾಣಿಯ ಕಲಚೂರಿಗಳು (ಕ್ರಿ.ಶ 1156 - 1183)


➤ ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ ಕಲ್ಯಾಣಿಯ ಕಲಚೂರಿಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು.

➤ ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.


ದ್ವಾರಸಮುದ್ರದ ಹೊಯ್ಸಳರು (ಕ್ರಿ.ಶ 985 - 1346)


➤ ಮೂಲ ಪುರುಷ : ಸಳ.

➤ ರಾಜಧಾನಿ : ಹಳೇಬೀಡು ಅಥವಾ ದ್ವಾರಸಮುದ್ರವಾಗಿತ್ತು.

➤ ಪ್ರಮುಖ ದೊರೆ : ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152)

➤ ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.


ವಿಜಯನಗರ ಸಾಮ್ರಾಜ್ಯ (ಕ್ರಿ.ಶ 1336 - 1565)


➤ ವಿದ್ಯಾರಣ್ಯರ ಸಹಾಯದಿಂದ ಹಕ್ಕ -ಬುಕ್ಕ ಸಹೋದರರಿಂದ ಸ್ಥಾಪಿತವಾದ ಈ ಸಾಮ್ರಾಜ್ಯವನ್ನು ಹಲವಾರು ಸಂತತಿಯ ರಾಜರು ವೈಭವದಿಂದ ಆಳಿದರು. 

➤  ರಾಜಧಾನಿ : ಹಂಪಿ

➤ ತುಳುವ ಸಂತತಿಯ ಕೃಷ್ಣದೇವರಾಯ (1519 - 1529) ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಬಲ ಹಾಗೂ ಖ್ಯಾತ ದೊರೆ.

➤ 1565 ರ ತಾಳೀಕೋಟೆ ಯುದ್ಧದಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು.


ಬಹಮನಿ ಸಾಮ್ರಾಜ್ಯ (ಕ್ರಿ.ಶ 1347 - 1527)


➤ ಸ್ಥಾಪಕ: ಅಲ್ಲಾವುದ್ದೀನ್ ಹಸನ್ ಬಹಮನ್ ಷಾ.

➤ ರಾಜಧಾನಿಗಳು : ಗುಲ್ಬರ್ಗಾ ಹಾಗೂ ಬೀದರ್.

Post a Comment

0 Comments
* Please Don't Spam Here. All the Comments are Reviewed by Admin.