ಮಬ್ಬು ಕವಿದರೇನು

ಮಬ್ಬು ಕವಿದರೇನು


ನಿನ್ನ ಹಬ್ಬಿದಿರುಳ ದಾರಿಗೆ

ನಡೆ ಮುಂದಕೆ ಧೈರ್ಯದಿಂದ

ಅರುಣೋದಯ ತೀರಕೆ


ಹಳೆ ನೆನಪುಗಳುದುರಲಿ ಬಿಡು

ಬೀಸುವ ಚಳಿ ಗಾಳಿಗೆ

ತರಗೆಲೆಗಳ ಚಿತೆಯುರಿಯಲಿ

ಚೈತ್ರೋದಯ ಜ್ವಾಲೆಗೆ


ಹೊಸ ಭರವಸೆ ಚಿಗುರುತಲಿವೆ

ಎಲೆ ಉದುರಿದ ಕೊಂಬೆಗೆ

ಅರಳಿ ನಗುವ ಹೂಗಳಲ್ಲಿ

ಪುಟಿಯುತಲಿವೆ ನಂಬಿಕೆ


ಹಗಲಿರುಳಿನ ಕುದುರೆಗಳನು

ಹೂಡಿದ ರಥ ಸಾಗಿದೆ

ಯುಗ ಯುಗಗಳ ಹಾದಿಯಲ್ಲಿ

ಋತು ಚಕ್ರಗಳುರುಳಿವೆ

Post a Comment

0 Comments
* Please Don't Spam Here. All the Comments are Reviewed by Admin.